ADVERTISEMENT

ಉತ್ತರ ಪತ್ರಿಕೆ ಕೊಡತಾ ಇದ್ದರು...

ರಾಧೇಶ ತೋಳ್ಪಾಡಿ ಎಸ್.
Published 26 ನವೆಂಬರ್ 2016, 19:30 IST
Last Updated 26 ನವೆಂಬರ್ 2016, 19:30 IST
ಚಿತ್ರ –ಭಾವು ಪತ್ತಾರ
ಚಿತ್ರ –ಭಾವು ಪತ್ತಾರ   

ಉತ್ತರ ಪತ್ರಿಕೆ ಕೊಡತಾ ಇದ್ದರು
ಲೆಕ್ಕದ ಮೇಷ್ಟ್ರು ಇವತ್ತು
ಮುಖ ಗಂಟಿಕ್ಕಿತ್ತು!
ಕಣ್ಣಲ್ಲೀಟಿ!
ಬೆತ್ತವು ಮೇಜಲ್ಲಿತ್ತು!
ಎಲ್ಲರ ಕತ್ತು ನೆಲ ನೋಡ್ತಿತ್ತು
ಇನ್ನೇನ್‌... ಸ್ಫೋಟದ ಹೊತ್ತು!

ಆ ಹೊತ್ತಲ್ಲೇ ಕಾಣಿಸ್ತು ಅದು
ಎಲ್ಲರ ಕಣ್ಣಿಗು ಬಿತ್ತು!

ಹಾಳೆಗಳನ್ನ ದಾರದ ಜೊತೆಗೆ
ಎಡಬದಿ ತೂತಿನ ಒಳಗೆ
ಕಟ್ಟಿದ್ನಲ್ಲಾ?
ಆ ತೂತಲ್ಲೇ
ಆರಡಿ ಉದ್ದದ ಕೂದಲು! ಅರರೇ!
ಸೇರ್ಕೊಂಡಿದ್ದು ಹೇಗೆ?

ADVERTISEMENT

ಮೆಲ್ಲಗೆ ಅರಳಿತು ಮೇಷ್ಟ್ರ ಮೊಗದಲಿ
ಎಂದೂ ಇಣುಕದ ನಗುವು!
ಮುಖ–ಮುಖ ನೋಡಿ ನಾವೂ ನಕ್ಕೆವು
ಹೇಗೋ ಧೈರ್ಯವ ಮಾಡಿ!

ಹ... ಹ್ಹ... ಹ್ಹ... ಹ್ಹ...
ಹೊ... ಹೊ... ಹ್ಹೊ... ಹೋ...
ಹರಿಯಿತು ನಗುವಿನ ಕೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.