ADVERTISEMENT

ಎರಡು ತಲೆ ಹಾವು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ಇವು ತುಂಬಾ ಅಪರೂಪದ ಸೃಷ್ಟಿ. ಆದರೆ ನಮ್ಮ ಸಯಾಮಿ ಅವಳಿಗಳಷ್ಟೇ ಸಾಮಾನ್ಯದವು. ಆದರೆ ಅದಕ್ಕೆ ಭಾರತದಲ್ಲಿ ದೈವತ್ವವನ್ನು ಅಂಟಿಸಲಾಗಿದೆ.
ಸಾಮಾನ್ಯವಾಗಿ ಅವು ಹೆಚ್ಚು ದಿನ ಬದುಕಲಾರವು. ಕಾರಣ ಎರಡಕ್ಕೂ ಒಂದೇ ಸಲ ಹಸಿವಾಗಿದೆ ಎಂಬ ಭಾವನೆ ಬರಬೇಕು.

ಎರಡೂ ಒಂದೇ ಸಲಕ್ಕೆ ಆಹಾರ ಸೇವಿಸಲು ಮನಸ್ಸು ಮಾಡಬೇಕು. ಅಲ್ಲದೇ   ಎರಡರಲ್ಲಿ ಯಾವುದು ಆಹಾರವನ್ನು ನುಂಗಬೇಕು ಎಂಬಲ್ಲಿಯತನಕ ಒಗ್ಗಟ್ಟು ಇರಬೇಕು. ಕೊಂಚ ಆ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬಂದರೂ ಸಾವು ಖಚಿತ.  ಸಾಮಾನ್ಯವಾಗಿ ಆಹಾರದ ವಿಚಾರಕ್ಕೆ ಕಿತ್ತಾಡಿಯೇ ಇವು ಸಾಯುತ್ತವೆ ಎನ್ನಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.