ADVERTISEMENT

ಒಂಚೂರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಪವಾಡಸದೃಶ ಪಾರು
ಏಪ್ರಿಲ್ 2011ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಮಹಿಳೆಯೊಬ್ಬರು ಅತಿ ವಿಚಿತ್ರವಾದ ಅಪಘಾತದಿಂದ ಪಾರಾದರು. ಸಮುಚ್ಚಯವೊಂದರ ಆರನೇ ಮಹಡಿಯ ಪಾರ್ಕಿಂಗ್ ಲಾಟ್‌ನಲ್ಲಿ ಅವರು ಕಾರು ನಿಲ್ಲಿಸಿದ್ದರು. ಅದನ್ನು ಕೆಳಗಿಳಿಸುವಾಗ ಆಯತಪ್ಪಿ ಸಣ್ಣತಡೆಗೋಡೆಯನ್ನು ಕಿತ್ತುಕೊಂಡು ಹೊರನುಗ್ಗಿತು. ಕಾರು ಪೂರ್ತಿ ನೆಲಕ್ಕೆ ಬೀಳದೆ ನಡುವಿನ ಅಂತಸ್ತಿನ ಗೋಡೆಯ ಒಂದು ಭಾಗ ಹಾಗೂ ಎದುರಿನ ಕಟ್ಟಡದ ಗೋಡೆಯ ಒಂದು ಭಾಗಕ್ಕೆ ತಗಲುಹಾಕಿಕೊಂಡಿತು. ಕಾರಿನಲ್ಲಿ ಕೂತಿದ್ದ ಮಹಿಳೆ ಬದುಕುಳಿದರು.

ಗಿನ್ನೆಸ್ ದಾಖಲೆ
ಇಂಗ್ಲೆಂಡ್‌ನ ಜಾನ್ ಇವಾನ್ಸ್ 1999ರಲ್ಲಿ ಕಾರೊಂದನ್ನು ತಲೆ ಮೇಲೆ ನಿಲ್ಲಿಸಿಕೊಂಡ ಕಾರಣಕ್ಕೆ ಗಿನ್ನೆಸ್ ದಾಖಲೆ ನಿರ್ಮಿಸಿದರು. ಎರಡು ಮೀಟರ್ ಎತ್ತರದ ಜಾನ್ 157 ಕೆ.ಜಿ. ತೂಕದ ಕಾರನ್ನು 33 ಸೆಕೆಂಡ್‌ಗಳ ಕಾಲ ತಮ್ಮ ತಲೆಯ ಮೇಲೆ ಬ್ಯಾಲೆನ್ಸ್ ಮಾಡಿದ್ದರು.


ಶೇಕ್ಸ್‌ಪಿಯರ್ ಸಹಿಯ ಬೆಲೆ
ವಿಶ್ವದ ಅತಿ ಹೆಚ್ಚು ಬೆಲೆಯ `ಆಟೋಗ್ರಾಫ್~ ಅರ್ಥಾತ್ ಸಹಿ ವಿಲಿಯಮ್ ಶೆಕ್ಸ್‌ಪಿಯರನದ್ದು ಎನ್ನಲಾಗುತ್ತಿದೆ. ಅಧಿಕೃತವಾಗಿ ಶೇಕ್ಸ್‌ಪಿಯರ್‌ನ ಆರು ಸಹಿಗಳು ಮಾತ್ರ ಉಳಿದಿದ್ದು, ಪರಿಣತರ ಪ್ರಕಾರ ಪ್ರತಿ ಸಹಿಯ ಈಗಿನ ಬೆಲೆ ಸುಮಾರು 13.3 ಕೋಟಿ ರೂಪಾಯಿ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.