ADVERTISEMENT

ಒಂಚೂರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಕುಂಭ ವಿವಾಹ
ಇಂಡೊ-ಟಿಬೆಟ್ ಗಡಿಯಲ್ಲಿ ಪೊಲೀಸ್ ಕೆಲಸ ಮಾಡುತ್ತಿದ್ದ ಚಮನ್ ಸಿಂಗ್ ನಿಗದಿತ ಸಮಯಕ್ಕೆ ತನ್ನ ಮದುವೆಯ ದಿನ ಕಲ್ಯಾಣಮಂಟಪ ತಲುಪಲು ಆಗಲಿಲ್ಲ. ಹಿಮದ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಅವನು ಮುಹೂರ್ತ ಮೀರುವ ಮೊದಲು ತಾಳಿ ಕಟ್ಟಲು ಸಾಧ್ಯವಾಗಲಿಲ್ಲ. ಪುರೋಹಿತರು ಗಂಡಿನ ಬದಲು ಅವನ ಫೋಟೊ ಇರಿಸಿ, ಮಡಿಕೆಯನ್ನೇ ವರನ ಸಂಕೇತವಾಗಿಟ್ಟು ವಿವಾಹ ನೆರವೇರಿಸಿದರು!

ಕೆಂಪು ಚೆಡ್ಡಿ
2002ರ ಸಾಲ್ಟ್ ಲೇಕ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಬರ್ಮುಡಾದ ಏಕೈಕ ಸ್ಪರ್ಧಿ ಪ್ಯಾಟ್ರಿಕ್ ಸಿಂಗಲ್‌ಟನ್ ಉದ್ಘಾಟನಾ ಸಮಾರಂಭದಲ್ಲಿ ಕೆಂಪು ಚೆಡ್ಡಿ ಧರಿಸಿ ಎಲ್ಲರ ಗಮನ ಸೆಳೆದ. ಕೊರೆಯುವ ಚಳಿಯಲ್ಲೂ ಬರೀ ಒಂದು ಚೆಡ್ಡಿ ತೊಟ್ಟು ಅವನು ಓಡಾಡಿದ್ದನ್ನು ಕಂಡು ಆಯೋಜಕರೂ ಚಕಿತಗೊಂಡಿದ್ದರು. ಅವನು ಧರಿಸಿದ್ದ ಚೆಡ್ಡಿಯನ್ನು ಸ್ವಿಟ್ಜರ‌್ಲೆಂಡ್‌ನ ಒಲಿಂಪಿಕ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಯಿತು.

ಅಬ್ಬಾ... ಚಳಿ ಚಳಿ
ಸಿಯಾಚಿನ್‌ನಲ್ಲಿ ಇರುವ ಯೋಧರು ಚಳಿಯಿಂದ ತಪ್ಪಿಸಿಕೊಳ್ಳಲು ಕನಿಷ್ಠ 20 ತುಂಡು ಬಟ್ಟೆಗಳನ್ನು ಧರಿಸಬೇಕು. ವಿಶ್ವದ ಅತಿ ಸೂಕ್ಷ್ಮ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ನಲ್ಲಿ ಕೆಲವೊಮ್ಮೆ ಉಷ್ಣಾಂಶ -50 ಡಿಗ್ರಿ ಸೆಲ್ಷಿಯಸ್ಸಿಗೆ ಇಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.