ADVERTISEMENT

ಒಂದು ಮನವಿ

ಕವಿತೆ

ಆರಿಫ್ ರಾಜಾ
Published 31 ಮೇ 2014, 19:30 IST
Last Updated 31 ಮೇ 2014, 19:30 IST

ನನ್ನ ಬಳಿ
ಉಳಿದಿದೆ ಕೊನೆಯ ಹಾಳೆ
ಒಂದೇ ಒಂದು ಬಿಳಿಯ ಟಾವು
ಆಗದ ಹೋಗದ ಹಾಳು ಮೂಳನ್ನೆಲ್ಲಾ
ಬರೆದು ಎಲ್ಲಾ ಖಾಲಿಯಾಗಿ ಹೋದವು
ಪುನಃ
ಸಾವಿರದ ಒಂದನೆಯ ಸಲ
ನನ್ನ ಹುಡುಗಿಗೆ ಪ್ರೇಮಪತ್ರ ಬರೆಯಲಾರೆ
ಅಥವಾ
ಎಷ್ಟೆಲ್ಲಾ ತಿಣುಕಿದರೂ ಬಾರದ ಮಲಬದ್ಧತೆ
ಯಂತಹ ಕವಿತೆಯಿಂದ ಹೇಸಿಗೆ ಮಾಡಲಾರೆ
ಹೀಗಾಗಿ ನಾನು ಬರೆಯುವೆ
ಪ್ರಜಾತಂತ್ರ ವ್ಯವಸ್ಥೆಯಲಿ ಸಂವಿಧಾನಬದ್ಧವಾಗಿ
ಆಯ್ಕೆಯಾದ ನೂತನ ನಾಯಕನಿಗೆ, ಭಾವಿ ಪ್ರಧಾನಿಗೆ
ಒಂದೇ ಒಂದು ಶಬ್ದ ಕೊನೆಯ ಒಂದು ಮಾತು
ಮನವಿ ಮಾಡಿಕೊಳ್ಳುವೆ
ನಿನ್ನ ಚುನಾವಣಾ ಪೂರ್ವ ಆಶ್ವಾಸನೆಯಂತೆ
ನನಗೆ ನನ್ನಂಥಹವರಿಗೆ ಸಾಧ್ಯವಾದರೆ
ನನ್ನ ಆತ್ಮಕ್ಕೆ ಅಭಯ ನೀಡೆಂದು...
ಆಮೇನ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.