ADVERTISEMENT

ಒಳ್ಳೆಯತನ!

Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST
ಒಳ್ಳೆಯತನ!
ಒಳ್ಳೆಯತನ!   

ಒಂದೂರಲ್ಲಿ ಒಂದು ಚೌರದ ಅಂಗಡಿ ಇತ್ತು. ಒಂದು ದಿನ ಒಬ್ಬ ಹೂವಿನ ಅಂಗಡಿಯವನು ಕಟಿಂಗ್ ಮಾಡಿಸಿಕೊಳ್ಳಲು ಆ ಅಂಗಡಿಗೆ ಬಂದ. ಚೌರದ ಅಂಗಡಿಯವನು ಆತನ ಹತ್ತಿರ ದುಡ್ಡನ್ನು ತೆಗೆದುಕೊಳ್ಳಲೇ ಇಲ್ಲ. ಮಾರನೆಯ ದಿನ ಬೆಳಗ್ಗೆ ಅಂಗಡಿಯವನು ಚೌರದ ಅಂಗಡಿಯ ಬಾಗಿಲು ತೆಗೆಯಲು ಬಂದಾಗ ಅವನಿಗೆ ಕಂಡಿದ್ದು, ಒಂದು ಬುಟ್ಟಿಯ ತುಂಬಾ ಗುಲಾಬಿ ಹೂವುಗಳು! ಅದು ಹೂವಿನ ಅಂಗಡಿಯವನು ಕಳುಹಿಸ್ದ್ದಿದ ಉಡುಗೊರೆ.

ಇನ್ನೊಂದು ದಿನ ಒಂದು ಚರ್ಚ್‌ನ ಫಾದರ್ ಕಟಿಂಗ್ ಮಾಡಿಸಿಕೊಳ್ಳಲು ಆ ಅಂಗಡಿಗೆ ಬಂದ. ಚೌರದ ಅಂಗಡಿಯವನು ಆತನ ಹತ್ತಿರವೂ ದುಡ್ಡನ್ನು ತೆಗೆದುಕೊಳ್ಳಲಿಲ್ಲ. ಮಾರನೆಯ ದಿನ ಬೆಳಿಗ್ಗೆ ಚೌರದ ಅಂಗಡಿಯವನು ಚೌರದ ಅಂಗಡಿಯ ಬಾಗಿಲು ತೆಗೆಯಲು ಬಂದಾಗ ಅವನಿಗೆ ಒಂದು ತಟ್ಟೆಯ ತುಂಬಾ ಕೇಕ್‌ಗಳು ಕಾಣಿಸಿದವು. ಅದು ಚರ್ಚ್‌ನ ಫಾದರ್ ಕಳುಹಿಸಿದ್ದಾಗಿತ್ತು.

ಮತ್ತೊಂದು ದಿನ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಕಟಿಂಗ್ ಮಾಡಿಸಿಕೊಳ್ಳಲು ಆ ಅಂಗಡಿಗೆ ಬಂದ. ಆಗಲೂ ಚೌರದ ಅಂಗಡಿಯವನು ಆತನ ಹತ್ತಿರ ದುಡ್ಡು ತೆಗೆದುಕೊಳ್ಳಲಿಲ್ಲ. ಮಾರನೆಯ ದಿನ ಆತನಿಗೆ ಒಂದು ದೊಡ್ಡ ಆಶ್ಚರ್ಯ ಕಾದಿತ್ತು! ಅಂಗಡಿಯ ಮುಂದೆ ಜನರ ಸಾಲಿತ್ತು. ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಸ್ನೇಹಿತರಿಗೆ ಕಳುಹಿಸಿದ್ದ `ಉಚಿತವಾಗಿ ಕಟಿಂಗ್ ಮಾಡಲಾಗುವುದು' ಎಂಬ ಇ-ಮೇಲ್ ಪ್ರಿಂಟೌಟ್ ಹಿಡಿದಿದ್ದ ಅವರೆಲ್ಲ ಚೌರದ ಅಂಗಡಿಯವನಿಗಾಗಿ ಕಾಯುತ್ತಾ ಸಾಲಿನಲ್ಲಿ ಕುಳಿತಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.