ADVERTISEMENT

ಕಪ್ಪೆಯಮ್ಮನ ಸಂಸಾರ

ಮಕ್ಕಳ ಪದ್ಯ

ಎನ್.ಶ್ರೀನಿವಾಸ ಉಡುಪ
Published 27 ಜೂನ್ 2015, 19:30 IST
Last Updated 27 ಜೂನ್ 2015, 19:30 IST

ವಟವಟಗುಟ್ಟೋ ಕಪ್ಪೆ ರಾಯಗೆ
ಟ್ರೊಂಯ್ ಟ್ರೊಂಯ್ ಅನ್ನೋ ಹೆಂಡತಿ
ಮೂರು ಮಕ್ಕಳು ಕಪ್ಪೆಯಮ್ಮನಿಗೆ
ಈಗ ಅವಳು ಬಾಣಂತಿ

‘ಟುಣುಕ್’ ಮೊದಲ ಮಗ, ‘ಪುಣುಕ್’ ಎರಡನೆಯವ
ಮೂರನೇಯನನೇ ‘ಗೊದಮೊಟ್ಟೆ’
ತಿಂಡಿಪೋತರು ಮೂರೂ ಮಕ್ಕಳು
ಹಸಿವೆಂದರೆ ಕಂಡಾಪಟ್ಟೆ!

ಮೊದಲನೆಯವನಿಗೆ ಹಾರುವ ಚಿಟ್ಟೆ
ಎರಡನೆಯಾತನಿಗೆ ಬಿಳಿ ಜಿರಳೆ
ಏನಾದರೂ ಸರಿ ಮೂರನೆಯಾತಗೆ
ಆದರೆ ಅವನೋ ಬಲು ತರಳೆ!

ADVERTISEMENT

ಮೂರೂ ಹೊತ್ತು ಕಪ್ಪೆಯಮ್ಮನಿಗೆ
ಅಡುಗೆ ಮನೆಯಲ್ಲೇ ದುಡಿತ
ತುರಿಸಿಕೊಳ್ಳಲೂ ಪುರುಸೊತ್ತಿಲ್ಲ
ಮರೆತೇ ಹೋಗಿದೆ ಸಂಗೀತ!
ಎನ್.ಶ್ರೀನಿವಾಸ ಉಡುಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.