ಚಂದಿರನೇತಕೆ
ಓಡುತಲಿರುವನು
ಅವನಿಗೆ ಕಾಲು
ನೋಯೋದಿಲ್ವ?
ನಿತ್ಯವು ಹೀಗೆ
ಓಡುವನಲ್ಲ
ಅವರ ಶಾಲೆಗೆ ಆಟೋ
ಬರೋದಿಲ್ವ?
ಎಷ್ಟು ದೂರವೋ
ಚಂದಿರನ ಶಾಲೆ
ಒಬ್ಬನೇ ಹೋಗೋಕೆ
ಬೇಜಾರಾಗೊಲ್ವ?
ಅವನನ್ನೂ ನಮ್ಜತೆ
ಹತ್ತಿಸಿಕೊಳ್ಳಿ ಅಂತ
ನಂ ಆಟೋ ಅಂಕಲ್‌ನ
ಕೇಳೋಣ್ವ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.