
ಚಿಟ್ಟೆ ಚಿಟ್ಟೆ ಎಲ್ಲಿಗೆ ಹೋಗುವೆ
ನನ್ನ ಹತ್ತಿರ ಬರುವೆಯಾ?
ನನ್ನಯ ಮನೆಯ ಆವರಣದಲ್ಲಿ
ಹೂಗಳ ನೋಡಿದೆಯಾ?
ಚಿಟ್ಟೆ ಚಿಟ್ಟೆ ನಿನ್ನಯ ರೆಕ್ಕೆಯ
ಬಣ್ಣಗಳಿರಿವಿದೆಯಾ
ಚುಕ್ಕಿಗಳಂದದ ಚಿತ್ತಾರಗಳಿವೆ
ಕನ್ನಡಿ ನೋಡಿದೆಯಾ?
ಚಿಟ್ಟೆ ಚಿಟ್ಟೆ ಹೂಗಳ ಹೃದಯದಿ
ಮಧುವನು ಹೀರುವೆಯಾ
ಹೂವಿನ ಜೊತೆಯಲಿ ಆಡಿದ ಮಾತು
ಆಲಿಸೆ ಕೇಳಿದೆಯಾ?
ಚಿಟ್ಟೆ ಚಿಟ್ಟೆ ಹಗಲಲಿ ಹಾರುವೆ
ರಾತ್ರಿ ಎಲ್ಲಿರುವೆ?
ಹೂಗಳ ದಳಗಳ ಹಾಸಿಗೆ ಮಾಡಿ
ಹೂಬನಕೆ ಬರುವೆಯಾ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.