ADVERTISEMENT

ಚೆಂಡಿನ ಗೋಳು

ಎನ್.ಶ್ರೀನಿವಾಸ ಉಡುಪ
Published 15 ಏಪ್ರಿಲ್ 2017, 19:30 IST
Last Updated 15 ಏಪ್ರಿಲ್ 2017, 19:30 IST
ಚೆಂಡಿನ ಗೋಳು
ಚೆಂಡಿನ ಗೋಳು   

ಕಪ್ಪಾ ನಂಗಿಂಥಾ ಶಿಕ್ಷೆ ಕೊಟ್ಟೆ ಭಗವಂತಾ?
ಮೂರೂ ಹೊತ್ತೂ ಒದೆತಾ ಹೊಡೆತಾ ತಿಂತಾ ಇರು ಅಂತಾ!

ಫುಸ್‌ ಫುಸ್‌ ಎಂದು ಗಾಳಿ ತುಂಬಿಸಿ ‘ಫುಟ್‌ ಬಾಲ್‌’ ಅಂತಾರೆ
ಎರ್ರಾಬಿರ್ರಿ ಒದೆದೂ ಒದೆದೂ ಮಜಾ ಮಾಡ್ತಾರೆ!

ಸುಸ್ತಾಗಿ ನಾ ಮೂಲೆ ಸೇರಿದರೆ ‘ಗೋಲ್‌, ಗೋಲ್‌’ ಅಂತಾರೆ
ಮುತ್ತಲ್ಲಿಂದ ಹೊರಕ್ಕೆ ಎಳೆದು ಗೋಳು ಹೊಯ್ತಾರೆ!

ADVERTISEMENT

‘ಕ್ರಿಕೆಟ್‌’ ಅಂತ ಬ್ಯಾಟಲಿ ನಂಗೆ ಫಟಾರ್ ಬಡೀತಾರೆ
ನೋವು ತಾಳದೆ ದೂರ ಓಡಿದರೆ, ಸಿಳ್ಳೆ ಹೊಡೀತಾರೆ!

ನೆಟ್ಟನು ಕಟ್ಟಿ ಆ ಕಡೆ ಈ ಕಡೆ ತಳ್ಳೀ ಕುಣಿತಾರೆ
ನೆಲದಲ್ಲಿರಿಸಿ, ‘ಹಾಕಿ’ ಎಂದು ದೊಣ್ಣೆಲಿ ಬಡಿತಾರೆ!

ಇಷ್ಟೊಂದ್‌ ಶಿಕ್ಷೆ ನನ್ನೊಬ್ಬನಿಗೆ ಯಾಕೋ ಗೊತ್ತಿಲ್ಲ!
ದೊಡ್ಡದಾಗಿದ್ರೂ, ಚಿಕ್ಕದಾಗಿದ್ರೂ ನೋವು ತಪ್ಪೋಲ್ಲ!

ಯಾರಿಗೂ ಬೇಡ ಇಂಥಾ ಗೋಳು, ಅಯ್ಯೋ ಭಗವಂತಾ!
ಯಾರು ಹೊಗಳಿದರೋ ನಿನ್ನನು ಭಾರೀ ‘ಕರುಣಾಕರ’ ಅಂತಾ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.