ADVERTISEMENT

ಡುಗಾಂಗ್

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2010, 12:05 IST
Last Updated 20 ಡಿಸೆಂಬರ್ 2010, 12:05 IST
ಡುಗಾಂಗ್
ಡುಗಾಂಗ್   

ಇದೊಂದು ಬೃಹತ್ ಬಂಡೆಯಂಥ ಪ್ರಾಣಿ. ನೋಡಿದಾಕ್ಷಣ ಭಯಹುಟ್ಟಿಸುವಂತೆ ಇರುವ ಇದು ಸಸ್ಯಗಳನ್ನು ತಿನ್ನುವ ಸಾಧುಪ್ರಾಣಿ.ಅದರ ಹೆಸರು ಡುಗಾಂಗ್. ಬೆಳಗಿನ ಹೊತ್ತು ವಿಶ್ರಾಂತಿ ಪಡೆಯುವ ಡುಗಾಂಗ್ ರಾತ್ರಿ ವೇಳೆ ಆಹಾರ ಹುಡುಕುತ್ತದೆ. ಅದು ತುಂಬಾ ಪರಿಣತ ಈಜುಗಾರ. ಪ್ರತೀ ಮುಳುಗಿಗೂ ಗಾಳಿಯಲ್ಲಿ ಉಸಿರಾಡಲು ನೀರ ಮೇಲೆ ಬರುವ ಇದು ನಾಚಿಕೆಯ ಸ್ವಭಾವದ ಪ್ರಾಣಿ. ಹಾಗೆಯೇ ಮೌನವಾಗಿ ಈಜುವ ನಿಧಾನದ ಪ್ರಾಣಿ. ತಮ್ಮ ಬೃಹತ್ ಗಾತ್ರದಿಂದ ಭಯ ಹುಟ್ಟಿಸುವ ಇವು 3 ಮೀಟರ್ ಉದ್ದ ಬೆಳೆಯುತ್ತವೆ.

ಆಸ್ಟ್ರೇಲಿಯಾದಲ್ಲಿ ಕಂಡುಬರುವ ಈ ಪ್ರಾಣಿ ನೀರಿನಲ್ಲೇ ತನ್ನ ಜೀವನದ ಹೆಚ್ಚು ಅವಧಿ ಕಳೆಯುತ್ತದೆ. ಆದರೆ ಅದು ಮೀನಿನ ಜಾತಿಗೆ ಸೇರುವುದಿಲ್ಲ. ಸಸ್ತನಿಯ ಗುಂಪಿಗೆ ಸೇರುತ್ತದೆ. ಕೂದಲಿರದ, ಕಠಿಣವಾದ, ಗಟ್ಟಿಯಾದ, ನೆರಿಗೆಗಳಿಲ್ಲದ ಚರ್ಮ ಅದಕ್ಕಿದೆ.

ಅದರ ಕೊಬ್ಬಿನಿಂದ ಮಾಡಬಹುದಾದ ಎಣ್ಣೆಗಾಗಿ ಮತ್ತು ಮಾಂಸಕ್ಕಾಗಿ ಅದನ್ನು ಬೇಟೆಯಾಡಲಾಗುತ್ತಿದೆ. ಅದರ ಹಲ್ಲುಗಳಿಂದ ಮಾಡುವ ಹಾರವನ್ನು ಧರಿಸಿದರೆ  ದೆವ್ವಗಳ ಕಾಟ ಇರುವುದಿಲ್ಲ ಎಂಬ ನಂಬಿಕೆಯೂ ಆ ಭಾಗದ ಕೆಲವು ಜನರಲ್ಲಿದೆ. ಅದರಿಂದ ಅವು ಅವನತಿಯ ಹಂತ ತಲುಪುತ್ತಿವೆ. ರಕ್ಷಿಸದಿದ್ದರೆ ಅವು ಕೆಲವೇ ವರ್ಷಗಳಲ್ಲಿ ನಾಶವಾಗುತ್ತವೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.