ADVERTISEMENT

ತಂದೆಯ ನೆನಪಿನ ಸಾರ!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ತಂದೆಯ ನೆನಪಿನ ಸಾರ!
ತಂದೆಯ ನೆನಪಿನ ಸಾರ!   

ಅಪ್ಪನೆಂದರೆ ಎಲ್ಲರಿಗೂ ಪ್ರೀತಿ, ಅದರಲ್ಲೂ ಹೆಣ್ಣುಮಕ್ಕಳಿಗೆ ಅಪ್ಪನ ಬಗ್ಗೆ ಹಿಡಿ ಪ್ರೀತಿ– ಅಭಿಮಾನ ಜಾಸ್ತಿ. ಅಪ್ಪ ಮಕ್ಕಳನ್ನು ಸಾಕಲು ಪಡುವ ಕಷ್ಟ, ಅದಕ್ಕಾಗಿ ಅವರು ಎದುರಿಸಿದ ಸವಾಲುಗಳು, ಕಲಿಸಿದ ಜೀವನ ಪಾಠ ಇವೆಲ್ಲವೂ ಕಣ್ಣ ಮುಂದೆ ಬಂದರೆ ಅಪ್ಪನ ಬಗ್ಗೆ ಎಲ್ಲಿಲ್ಲದ ಅಭಿಮಾನ ಮೂಡುತ್ತದೆ. ಹೀಗೆ ಅಪ್ಪನ ಮೇಲೆ ಅಭಿಮಾನದಿಂದ ಭಾರತೀ ಕಾಸರಗೋಡು ಬರೆದ ಪುಸ್ತಕವೇ ‘ಅಣ್ಣಯ್ಯನ ಮಾತು’.

ಅಪ್ಪನನ್ನು ಅಣ್ಣಯ್ಯ ಎಂದು ಕರೆಯುವ ಲೇಖಕಿ ತನ್ನ ಹಾಗೂ ಅಣ್ಣಯ್ಯನ ನಡುವೆ ನಡೆದ ಪ್ರತಿ ಪ್ರಸಂಗವನ್ನು ಸುಂದರವಾಗಿ, ಚಿಕ್ಕ ಚಿಕ್ಕ ಘಟನೆಗಳನ್ನು ನೆನಪಿಸಿಕೊಂಡು ಆ ನೆನಪುಗಳಿಗೆ ಅಕ್ಷರರೂಪ ನೀಡಿದ್ದಾರೆ. ತನ್ನ ಜೀವನ ಅಲ್ಲದೇ ತನ್ನ ಅಣ್ಣಯ್ಯನ ಬದುಕಿನಲ್ಲೂ ನಡೆದ ಕೆಲ ಘಟನೆಗಳು ಅಣ್ಣಯ್ಯನನ್ನು ಹೇಗೆ ಶಿಸ್ತಿನ ಸಿಪಾಯಿಯಾಗಿಸಿದವು ಎಂಬುದನ್ನು ಚೊಕ್ಕದಾಗಿ ವಿವರಿಸಿದ್ದಾರೆ ಲೇಖಕಿ.

ಬರೀ ಗಂಭೀರ ಸ್ವರೂಪದ ಅಣ್ಣಯ್ಯನಲ್ಲದೇ ಪ್ರೀತಿ, ಮಮತೆ, ಅಕ್ಕರೆ ತೋರುವ ಅಣ್ಣಯ್ಯನ ಪರಿಯನ್ನು ಮನಸ್ಸಿಗೆ ಮುಟ್ಟುವಂತೆ ನಿರೂಪಿಸಿದ್ದಾರೆ. 88 ಪುಟಗಳ ಈ ಪುಸ್ತಕದಲ್ಲಿ ಬರುವ ಪ್ರತಿ ಸನ್ನಿವೇಶವೂ ನಮ್ಮ ನಿಮ್ಮ ಮನೆಗಳಲ್ಲಿ ತಂದೆ– ಮಗಳ ನಡುವೆ ನಡೆದ ಸನ್ನಿವೇಶದಂತೆ ಮನಸ್ಸಿಗೆ ನಾಟುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.