ADVERTISEMENT

ತೆರೆ

ಆರಿಫ್ ರಾಜಾ
Published 14 ಫೆಬ್ರುವರಿ 2015, 19:30 IST
Last Updated 14 ಫೆಬ್ರುವರಿ 2015, 19:30 IST
ಪುಂಡಲೀಕ ಕಲ್ಲಿಗನೂರು
ಪುಂಡಲೀಕ ಕಲ್ಲಿಗನೂರು   

ಹೃದಯವೊಂದು ತಳವೊಡೆದ ದೋಣಿ
ಯಾವಾಗ ಮುಳುಗುವುದೊ ಬಲ್ಲವರಾರು?
ನೂರು ಸಲ ತೀಡಿ ಕಾಡಿಗೆ ಹಚ್ಚಬೇಡ
ಎಲ್ಲ ಪ್ರೇಮಗಳು ಅಮರ ಎಂದವರಾರು?
ಹೃದಯ ಇರುವತನಕ ಅನುರಾಗ ಸಹಜ
ಕಂಗಳಿರುವತನಕ ಕಂಬನಿ ಇಲ್ಲೆಂದವರಾರು?
ಬೇಸರ ಮತ್ತು ಏಕಾಂತ ಜೀವದ ಗೆಳೆಯರು
ನಂಬುಗೆಯ ನೇಹಿಗರನು ಅಗಲಿಸಿದವರಾರು?
ಮಧುಶಾಲೆಯ ಮುಂದೆ ಭಾಷಣ ಬಿಗಿದವರೇ
ಸುಟ್ಟ ಹೃದಯಕೆ ಸಾಂತ್ವಾನ ನೀಡುವವರಾರು?
ಬಜಾರಿನಲಿ ಬಿಕರಿಗಿವೆ ನೂರಾರು ಕನಸುಗಳು
ಕರ್ಪ್ಯೂ ವಿಧಿಸಿದ ಶಹರದಲಿ ಕೊಳ್ಳುವವರಾರು?
ಅಮಲಿರುವತನಕ ನಾನು ನೀನು ಈ ಲೋಕವೆಲ್ಲಾ
ನಶೆಯಾರಿದ ಮೇಲೆ ಚೆಲುವು ಮೂಸುವವರಾರು?
ಮನ ಮನಸುಗಳ ನಡುವೆ ಸಂಶಯಾಗ್ನಿ ಗೆಳೆಯಾ
ಕೋವಿ ಇರುವ ತನಕ ಕೊಳಲ ಕೇಳುವವರಾರು?
ದತ್ತು ತೆಗೆದುಕೊಳ್ಳುವವರಿಲ್ಲ ದುಗುಡವನು ರಾಜಾ
ಈ ಶಹರಿನಲಿ ಗಿರಾಕಿಯನು ಹುಡುಕುವವರಾರು?

ಮುಳ್ಳಿಲ್ಲದ ಗುಲಾಬಿ ಬೆಳೆದವರಾರು?

ನೋವಿಲ್ಲದ ಪ್ರೀತಿ ಪಡೆದವರಾರು?
-ಅನಾಮಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT