ADVERTISEMENT

ನಾಗರಿಕತೆ

ಕವಿತೆ

ಅಶೋಕ ಹೆಗಡೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ನಾಗರಿಕತೆ

ಮುರಿ, ನನ್ನೊಳಗಿನ ಎಲ್ಲವನ್ನು
ಸುಡು, ಕನಸುಗಳನ್ನ ಸುಡುವ ನಿನ್ನ ಒಡಲ ಉರಿಯಲ್ಲಿ
ಮುಚ್ಚು, ಜಗದ ಜೀವಗಳ ಕಣ್ತಪ್ಪಿಸುವ ನಿನ್ನ ಮಾಯಾವಿ ವಸ್ತ್ರಗಳಿಂದ
ಕುದಿಸು, ನನ್ನ ಎಲ್ಲವನ್ನೂ ನಗರವೆಂಬ ನಿನ್ನ ದೈತ್ಯಪಾತ್ರೆಯಲ್ಲಿ
ಹರಿಸು, ನನ್ನ ನರನಾಡಿಯಲ್ಲಿ ನಿನ್ನ ವೈಭೋಗವನ್ನ ವೃದ್ಧಿಸುವ
ಸಾವಿರ ಸಾವಿರ ವೋಲ್ಟಿನ ವಿದ್ಯುತ್ ತಂತಿಗಳಲ್ಲಿ ಬತ್ತದ ವಿಷ ಪಾಷಾಣಗಳನ್ನ

ಇಷ್ಟಾದಮೇಲೂ
ಇನ್ನೂ ಏನಾದರೂ ಉಳಿದರೆ
ಚೆಲ್ಲು, ಅವುಗಳನ್ನ ನಿನ್ನ ಕಾರ್ಖಾನೆಗಳ ಚಿಮಣಿಗಳ ಒಳಗೆ
ಅಥವಾ ಹೂತಿರುವ ಕಾರ್ಪೊರೇಟ್ ಮುಖ್ಯಾಧಿಕಾರಿಯ ಕಾರಿನ ಗಾಲಿಗಳಡಿಗೆ
ನಂತರ ನನ್ನ ಬುಡಗಳನ್ನ ನೋಡು
ನಿನ್ನ ಅಳತೆಯನ್ನು ಮೀರಿದ ನಿನ್ನ ಆಜ್ಞೆಯನ್ನು ಧಿಕ್ಕರಿಸಿದ
ನನ್ನ ಬೇರುಗಳಲ್ಲಿ ಮಾತ್ರ ಹೊಳೆಯುವ ಹೊಸ ಚಿಗುರನ್ನು
ಅದರ ಮರುಹುಟ್ಟಿನ ಸಂಭ್ರಮವನ್ನು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT