
ಪ್ರಜಾವಾಣಿ ವಾರ್ತೆಅಲ್ಲಾಡ್ದಿರೋ ಆಕಾಶಕ್ಕೆ ಎಲ್ಲುಂಟಪ್ಪಾ ಕಂಬ?
ಹುಂಜದ ಜುಟ್ಟಲ್ಲಿಟ್ಟೋರ್ಯಾರು ತುಂಬಾ ತುಂಬಾ ಜಂಬ?
ನಂಗ್ಯಾಕಿಲ್ಲ ಹಕ್ಕಿ ಹಾಗೆ ಹಾರೋಕೆರಡು ರೆಕ್ಕೆ?
ಇಂಗ್ಲಿಷ್ ‘ಎಸ್’ಗೆ ಯಾಕ್ ಬೇಕಿತ್ತು ಎರಡೂ ಕಡೆಗೂ ಕೊಕ್ಕೆ?
ತೆಂಗೀನ್ ಮರದ ತುದೀಗೆ ಹತ್ತಿ ಕಾಯಿನ್ನಿಟ್ಟೋರ್ಯಾರು?
ಎಳೇಕಾಯಲಿ ಹೇಗಪ್ಪಾ ಇದೆ ಸೀ ಸೀ ಸಕ್ಕರೆ ನೀರು?
ಕಾಮನ ಬಿಲ್ಲಿಗೆ ಕಲರ್ರು ಬಳಿದು ಬಾನಿಗೆ ಅಂಟ್ಸೋದ್ಯಾಕೆ?
ದಿನಾ ಕೊಕ್ಕರೆ ಸೋಪನು ಹಚ್ಚಿ ಸ್ನಾನ ಮಾಡ್ಲೇಬೇಕೆ?
ಕುಂಯ್ ಟ್ರುಂಯ್ ಅನ್ನೋ ಮೊಬೈಲ್‌ಗ್ಯಾಕೆ ಅಪ್ಪನ ಕಿವಿ ಅಷ್ಟಿಷ್ಟ
ಲೆಕ್ಕದ ಮಿಸ್ಸಿಗೆ ರಜೆ ಹಾಕೋಕೆ ಯಾಕಪ್ಪಾ ಅಷ್ಟ್ ಕಷ್ಟ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.