ಯಾಕಪ್ಪಾ ಮಗು, ನಿಂತಿದ್ದೀಯಾ
ಬೆರಳನು ಚೀಪುತ್ತಾ?
ಮೋಡದ ಊರಿಗೆ ದಾರಿ ಯಾವುದು,
ತಾತ, ನಿಮಗೆ ಗೊತ್ತಾ?
ಯಾಕಪ್ಪಾ ಮಗು, ಸುಮ್ಮನೆ ಕುಳಿತೆ
ನೋಡುತ ಬಾನತ್ತ?
ತಾತ, ಸುಮ್ಮಗಿರಿ; ಕುಳಿತಿದ್ದೇನೆ
ಚಿಕ್ಕೆಗಳೆಣಿಸುತ್ತಾ!
ಯಾಕಪ್ಪಾ ಮಗು, ಮಲಗಿದ್ದೀಯಾ
ಪಿಳಿ ಪಿಳಿ ನೋಡುತ್ತಾ?
ತಾತ, ಈ ಅಮ್ಮ ಎಲ್ಲಿಂದ ತಂದಳೋ
ಇಂಥಾ ಸಿಹಿ ಮುತ್ತ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.