ADVERTISEMENT

ಬಾಳೆಹಣ್ಣು ಬೆರಿ ಕಣ್ರೀ... ಸ್ಟ್ರಾಬೆರಿ ಅಲ್ಲ!

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
ಬಾಳೆಹಣ್ಣು ಬೆರಿ ಕಣ್ರೀ... ಸ್ಟ್ರಾಬೆರಿ ಅಲ್ಲ!
ಬಾಳೆಹಣ್ಣು ಬೆರಿ ಕಣ್ರೀ... ಸ್ಟ್ರಾಬೆರಿ ಅಲ್ಲ!   

ಸ್ಟ್ರಾಬೆರಿ ಹಣ್ಣು ಹೆಸರಿಗಷ್ಟೆ ಬೆರಿ. ಅದೇನು ಬೆರಿ ಕುಟುಂಬಕ್ಕೆ ಸೇರಿದ್ದಲ್ಲ. ಬೆರಿ ಅಂದರೆ ಒಂದೇ ಹೂವಿನಿಂದ ಜೀವತಳೆದ ಮೃದುವಾದ ತಿರುಳಿನ ಒಳಗೆ ಅನೇಕ ಬೀಜಗಳಿರುವ ಹಣ್ಣಂತೆ. ಸ್ಟ್ರಾಬೆರಿಗೆ ಅದರ ಮೈಮೇಲೆಲ್ಲ ಚುಕ್ಕೆ ಇಟ್ಟಂತೆ ಬೀಜಗಳಿವೆಯಲ್ಲ ಮತ್ತೆ?! ರಾಸ್ಬೆರಿ ಮತ್ತು ಬ್ಲ್ಯಾಕ್‌ ಬೆರಿಗಳೂ ಬೆರಿ ಕುಟುಂಬಕ್ಕೆ ಸೇರಿಲ್ಲ. ಬ್ಲೂ ಬೆರಿ ಮಾತ್ರ ನಿಜವಾದ ಬೆರಿ ಅಂತೆ. ನೋಡಿದ್ರಾ?

ಹಾಗೆ ನೋಡಿದರೆ ಬಾಳೆಹಣ್ಣು  ಬೆರಿ ಕುಟುಂಬಕ್ಕೆ ಸೇರುತ್ತದೆ! ಇನ್ನೂ ಮಜ ಗೊತ್ತಾ? ವೈಜ್ಞಾನಿಕವಾಗಿ ದ್ರಾಕ್ಷಿ, ಕಿತ್ತಳೆ ಕೂಡ ಬೆರಿ ಕುಟುಂಬಸ್ಥರೇ.
ಈಗ ಯಾಕೆ ಇದೆಲ್ಲ?

ಚೆರಿ ಕೂಡ ಬೆರಿ ಅಲ್ಲ ಅಂತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ಪ್ರೊಫೆಸರ್‌ ಜೂಡಿ ಅಭಿಮತ. ಸಸ್ಯವಿಜ್ಞಾನದ ವಿವರಣೆಗೆ ನಿಲುಕುವುದು– ಬೆರಿ ಅಂದರೆ ಅದರಲ್ಲಿ ಮೂರು ತಿರುಳುಗಳ ಪದರುಗಳಿರಬೇಕು– ಎಕ್ಸೋಕಾರ್ಪ್‌(ಹೊರ ಪದರ), ಮಿಸೋಕಾರ್ಪ್‌ (ಮೃದುವಾದ ಒಳ ತಿರುಳು) ಮತ್ತು ಎಂಡೋಕಾರ್ಪ್‌(ಬೀಜಗಳಿರುವ ಅತ್ಯಂತ ಒಳ ಪದರ).

ADVERTISEMENT

ಅಲ್ಲದೆ ಬೆರಿ ಎನಿಸಿಕೊಳ್ಳಲು ಇರುವ ಅರ್ಹತೆ ಹಣ್ಣಿನಲ್ಲಿ ಒಂದಕ್ಕಿಂತ ಹೆಚ್ಚು ಬೀಜಗಳಿರಬೇಕು ಎನ್ನುವುದು. ಒಂದೇ ಬೀಜ ಇರುವ ಚೆರಿಗಳು ಬೆರಿ ಹೇಗಾದಾವು? ಹಾಗಾಗೇ ಅವು ಡ್ರೂಪ್‌ಗಳು. ಈಗ ಬಾಳೆಹಣ್ಣಿನ ರಚನೆ ನೆನಪಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.