ADVERTISEMENT

ಮಗು ಮತ್ತು ಇರುವೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಇರುವೆ ಇರುವೆ ಇರುವೆ
ಮಳೆಗಾಲಕ್ಕೇನು ಕೂಡಿಡುವೆ?
ದಂಡಿನೊಳು ತಂದದ್ದೇನು
ಬಂಡೆಯಾಕೆ ಮುಚ್ಚಿಡುವೆ?

ಮಗುವೆ ಎಳೆ ಮಗುವೆ - ನೀ
ಇರುವೆ ಹಾದಿಯಲಿರುವೆ!
ದಂಡೋ ಹಿಂಡೋ ಎಂಥದ್ದೋ
ನಿನಗ್ಯಾಕೆ ನಮ್ಮಯ ಗೊಡವೆ?

ಅಡುಗೆ ಮನೆಯೊಳು ಉಂಡೆ ಬೆಲ್ಲ
ಅಮ್ಮ ಇಟ್ಟಳು ನೋಡು
ಬಂಡೆಯ ಸರಿಸಿ ನಿಜವನು ತೋರಿಸು
ಕೊಡುವೆ ಸಕ್ಕರೆ ಲಾಡು

ADVERTISEMENT

ಲಾಡಿಗೆ ಆಸೆಯ ಪಟ್ಟರೆ ಮಗುವೆ
ಮಾಡುವುದ್ಯಾರೋ ಗೂಡು?
ಹಸಿವಿನ ಗುಟ್ಟದು ಬಂಡೆಯ ಕೆಳಗಡೆ
ಹಸುಳೆ ಸರ ಸರ ಹೊರಡು.

ಮೆತ್ತನೆ ಹಾಸಿಗೆ ತಂಪನೆ ಹವೆಯ
ಚಂದದ ಕೋಣೆಯ ಕೊಡುವೆ
ಮನಸನು ಸಡಿಲಿಸಿ ಒಗಟನು ಬಿಡಿಸೊ
ಆತುರವೆ ನನಗಿರುವೆ!

ಬದುಕಿನ ಗುಟ್ಟ ಬೀದಿಗೆ ಬಿಡಲು
ನಾವಲ್ಲ ಮಗು ಮನುಜರು!
ನಿನ್ನದು ನಿನಗೆ ನಮ್ಮದು ನಮಗೆ
ಮಣ್ಣಿನ ಮನೆಯೋ ತಯಾರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.