ಪುಟ್ಟ:
ಅಮ್ಮಾ, ಅಮ್ಮಾ, ನಮ್ಮನೆಗೀದಿನ ಮಾವ ಬರ್ತಾನಾ?
ಕ್ರಿಕೆಟ್ಟು ಸ್ಟಂಪು, ಬ್ಯಾಟು, ಬಾಲು – ಎಲ್ಲಾ ತರ್ತಾನಾ?
ಸಿಕ್ಸರ್ ಹೊಡೆದರೆ ಖುಷಿ ಖುಷಿಯಾಗಿ ಕುಣಿದೇ ಬಿಡ್ತಾನಾ?
ಸುಸ್ತಾಗಿದ್ದರೆ ಚಾಕ್ಲೇಟ್ ತಂದು ತಿನ್ನೋಕೆ ಕೊಡ್ತಾನಾ?
ಲೆಕ್ಕ ಕಲಿಸಿ, ಹೋಮ್‌ವರ್ಕ್ ಮಾಡಿಸಿ, ಕೊಶ್ಚನ್ ಕೇಳ್ತಾನಾ?
ಅಕ್ಕನ ಕರೆದು, ಪಕ್ಕದಿ ಕೂರಿಸಿ, ಕಥೇನ ಹೇಳ್ತಾನಾ?
ಅಮ್ಮಾ, ಅಮ್ಮಾ, ನಮ್ಮನೆಗೀದಿನ ಮಾವ ಬರ್ತಾನಾ?
ಆಫೀಸ್ ಕೆಲಸಕೆ ಚಕ್ಕರ್ ಹಾಕಿ, ನಂಜೊತೆಗಿರ್ತಾನಾ?
ಅಮ್ಮಾ:
ಅಯ್ಯೋ ಪುಟ್ಟಾ, ಮಾವಂಗೀಗ ಎಲ್ಲಿದೆ ಪುರಸೊತ್ತು?
‘ಆಫೀಸ್ ಕೆಲಸ’ ಅಂತಿರ್ತಾನೆ ದಿನಾ ಮೂರ್ ಹೊತ್ತೂ!
ಊಟ, ತಿಂಡಿ ಎಲ್ಲಾ ಮರೆತು, ಲ್ಯಾಪ್ ಟಾಪ್ ಎದುರಿಗೆ ಕೂತು
ಯಾರ್‍ಯಾರೊಂದಿಗೋ ಠುಸ್ ಪುಸ್ ಅಂತ ಮೊಬೈಲ್‌ನಲ್ಲೇ ಮಾತು!
ಹೀಗಿರೋವಾಗ ನೀ ಕೊಡಬೇಡ ಮಾವಂಗೇನೂ ಕಾಟ
ಲೆಕ್ಕ ಪಕ್ಕ ನೀನೇ ಮಾಡಿಕೋ, ಅಕ್ಕನ ಜೊತೆಗೇ ಆಟ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.