ADVERTISEMENT

ಮಿನುಗುಮಿಂಚು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ಗೊತ್ತೆ ಎಲ್ವಿಸ್ ಪ್ರೆಸ್ಲಿ?
ಎಲ್ವಿಸ್ ಪ್ರೆಸ್ಲಿ ಯಾರು?
ಅಮೆರಿಕದ ರಾಕ್ ಹಾಡುಗಾರ. 1950ರ ದಶಕದ ಕೊನೆ ಹಾಗೂ 1960ರ ದಶಕದಲ್ಲಿ ಎಲ್ವಿಸ್ ಜನಪ್ರಿಯತೆಯ ಅಲೆ ಇತ್ತು.

ಅವರಿಗೆ ಯಶಸ್ಸಿನ ರುಚಿ ಮೊದಲು ಸಿಕ್ಕಿದ್ದು ಯಾವಾಗ?
ಒಂದಿಷ್ಟು ವರ್ಷ ಲಾರಿ ಚಾಲಕ ಆಗಿದ್ದ ಎಲ್ವಿಸ್‌, 1956ರಲ್ಲಿ ‘ಹಾರ್ಟ್‌ಬ್ರೇಕ್‌ ಹೋಟೆಲ್‌’ ಎಂಬ ತಮ್ಮ ಮೊದಲ ಸಂಗೀತದ ಆಲ್ಬಂ ರೂಪಿಸಿದರು. ಆಗ ಅವರಿಗಿನ್ನೂ 21 ವರ್ಷ ವಯಸ್ಸು. ಆ ವರ್ಷದ ಕೊನೆಗೆ ಅವರು ಮಿಲಿಯನ್‌ಗಟ್ಟಲೆ ಹಣ ಸಂಪಾದಿಸಬಲ್ಲ ಜನಪ್ರಿಯ ಗಾಯಕ ಎನಿಸಿದರು. ಅವರು ರೂಪಿಸಿದ ‘ಹೌಂಡ್‌ ಡಾಗ್‌’, ‘ಲವ್‌ ಮಿ ಟೆಂಡರ್‌’ ಗೀತೆಗಳು ಜನಪ್ರಿಯವಾದವು.

ಅವರು ತಮ್ಮ ಎಷ್ಟು ಧ್ವನಿಮುದ್ರಿಕೆಗಳನ್ನು ಮಾರುತ್ತಿದ್ದರು?
ಎರಡೇ ವರ್ಷದ ಅವಧಿಯಲ್ಲಿ ಪ್ರೆಸ್ಲಿ ರೂಪಿಸಿದ ಗೀತೆಗಳ ನಾಲ್ಕು ಕೋಟಿ ಧ್ವನಿಮುದ್ರಿಕೆಗಳು ಮಾರಾಟವಾಗಿ, ದಾಖಲೆ ನಿರ್ಮಾಣವಾಯಿತು. 23ನೇ ವಯಸ್ಸಿನಲ್ಲಿ ತಿಂಗಳಿಗೆ ಲಕ್ಷಗಟ್ಟಲೆ ಡಾಲರ್‌ ಸಂಪಾದಿಸಬಲ್ಲ ಪ್ರತಿಭೆ ಅವರೆನಿಸಿಕೊಂಡರು. 30 ಚಿತ್ರಗಳಲ್ಲೂ ಅದಾಗಲೇ ಅವರು ನಟಿಸಿದ್ದರು.

ADVERTISEMENT

ಸಂಗೀತದ ವಿದ್ಯಾರ್ಥಿಯಾಗಿದ್ದಾಗ  ಎಲ್ವಿಸ್ ಕುರಿತು ಅವರ ಗುರು ಏನನ್ನುತ್ತಿದ್ದರು?
ಎಲ್ವಿಸ್‌ ಗಿಟಾರ್‌ ಹಿಡಿದು ಹಾಡಿದ್ದನ್ನು ಕಂಡ ಅವರ ಗುರು, ‘ಇವನು ಡ್ರೈವರ್‌ ಆಗಲಷ್ಟೇ ಲಾಯಕ್ಕು’ ಎಂದಿದ್ದರು. ಆದರೆ, ಅವರ ಅಭಿಪ್ರಾಯ ಸುಳ್ಳಾಗಿಸುವಂತೆ ಎಲ್ವಿಸ್‌ ಬೆಳೆದರು.

ಟೆನೆಸ್ಸಿಯ ಮೆಂಫಿಸ್‌ನಲ್ಲಿರುವ ‘ಎಲ್ವಿಸ್‌ ಮೆಮೋರಿಯಲ್‌’ಗೆ ಪ್ರತಿವರ್ಷ ಅಸಂಖ್ಯ ಜನ ಭೇಟಿ ನೀಡುತ್ತಾರೆ. ಅದರಲ್ಲೂ ಎಲ್ವಿಸ್‌ ಪುಣ್ಯತಿಥಿಯ ದಿನ ಅವರ ಸಾವಿರಾರು ಅಭಿಮಾನಿಗಳು ಸ್ಮಾರಕ ನೋಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.