ADVERTISEMENT

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2013, 19:59 IST
Last Updated 28 ಸೆಪ್ಟೆಂಬರ್ 2013, 19:59 IST
ಮಿನುಗು ಮಿಂಚು
ಮಿನುಗು ಮಿಂಚು   

ಪರಿಸರ ದಿನದ ಔಚಿತ್ಯ

ವಿಶ್ವ ಪರಿಸರ ದಿನವನ್ನು ಮೊದಲು ಆಚರಿಸಿದ್ದು ಯಾವಾಗ?
ವಿಶ್ವಸಂಸ್ಥೆಯು 1973ರಿಂದ ವಿಶ್ವ ಪರಿಸರ ದಿನ ಆಚರಿಸಲು ಆರಂಭಿಸಿತು. ಆಗ ಅದು ನಡೆಸಿದ್ದ ಮಾನವ ಪರಿಸರ ಕುರಿತ ವಿಚಾರ ಸಂಕಿರಣದ ನೆನಪಿನಲ್ಲಿ ಪ್ರತಿವರ್ಷ 5ನೇ ಜೂನ್‌ನಲ್ಲಿ ‘ಪರಿಸರ  ದಿನ’ ಆಚರಿಸಲಾಗುತ್ತಿದೆ.

ಈ ಆಚರಣೆಯ ಉದ್ದೇಶವೇನು?
ಪರಿಸರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ಯಶಸ್ವಿಯಾಗಿ ತರಲು ಇದೊಂದು ಅರ್ಥಪೂರ್ಣ ನೆಪ. ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪರಿಸರ ದಿನವನ್ನು ಕಳೆಗಟ್ಟಿಸುತ್ತಾರೆ.

2013ರ ಪರಿಸರ ದಿನದ ‘ಥೀಮ್’ ಏನು?
‘ಥಿಂಕ್, ಈಟ್ ಸೇವ್’ ಎಂಬುದು ಈ ವರ್ಷದ ಥೀಮ್ ಆಗಿತ್ತು. ಆಹಾರದ ಪೋಲು ಮತ್ತು ಅದನ್ನು ಚೆಲ್ಲುವ ಧೋರಣೆಯನ್ನು ಖಂಡಿಸುವ ಥೀಮ್ ಇದು. ಆಹಾರದ ಕೊರತೆಯ ಪ್ರಮಾಣ ತಗ್ಗಿಸುವ ದಾರಿಗಳನ್ನು ಹುಡುಕುವ ಯತ್ನವಾಗಿಯೂ ಈ ಥೀಮ್ ಇಟ್ಟುಕೊಳ್ಳಲಾಗಿತ್ತು.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಪ್ರಕಾರ ಪ್ರತಿವರ್ಷ 130 ಕೋಟಿ ಟನ್‌ನಷ್ಟು ಆಹಾರವನ್ನು ಚೆಲ್ಲಲಾಗುತ್ತಿದೆ. ಇದರಿಂದ ಪರಿಸರದ ಮೇಲೂ ಪ್ರತಿಕೂಲ ಪರಿಣಾಮಗಳಾಗುತ್ತಿವೆ.

ಈ ಬಾರಿ ಪರಿಸರ ದಿನವನ್ನು ವಿಶ್ವಸಂಸ್ಥೆ ಎಲ್ಲಿಂದ ಪ್ರಾರಂಭಿಸಿತು?
ಮಂಗೋಲಿಯಾದಿಂದ ಪ್ರಾರಂಭಿಸಿತು.

ಭಾರತ ಎಂದಾದರೂ ವಿಶ್ವಸಂಸ್ಥೆಯ ಪರಿಸರ ದಿನದ ಆತಿಥ್ಯ ವಹಿಸಿತ್ತೆ?
ಹೌದು, 2011ರಲ್ಲಿ ನವದೆಹಲಿ ಆತಿಥ್ಯ ವಹಿಸಿತ್ತು. ಆ ವರ್ಷದ ಥೀಮ್ ‘ಅರಣ್ಯಗಳು- ನಿಮ್ಮ ಸೇವೆಯಲ್ಲಿರುವ ಪ್ರಕೃತಿ’.
ಅಂದಹಾಗೆ, ಒಂದು ಲೀಟರ್ ಹಾಲು ಉತ್ಪಾದಿಸಲು ಒಂದು ಸಾವಿರ ಲೀಟರ್ ನೀರು ಬೇಕು. ಒಂದು ಕೆ.ಜಿ. ಅಕ್ಕಿ ಉತ್ಪಾದಿಸಲು ಐದು ಸಾವಿರ ಲೀಟರ್ ನೀರು ಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT