

ಗಮ್ಮತ್ತೋ ಗಮ್ಮತ್ತು
ಮೀನಿನ ಮಳೆಯೂ
ಬಿತ್ತೂ!
ಬೆಳ್ಳಿ ಬೆಕ್ಕು
ಬಾಲ ಕೊಡವಿ
ಬಳ್ಳೆ ಹಿಡಿದು
ಹೊರಟಿತ್ತು.!
ಗಮ್ಮತ್ತೋ ಗಮ್ಮತ್ತು
ಮೀನಿನ ಮಳೆಯೂ
ಬಿತ್ತೂ!
ಕರಿಯ ಬೆಕ್ಕು
ಕಾಡಿಗೆ ಹಚ್ಚಿ
ಕಡಾಯಿ ಹೊತ್ತು
ಹೊರಟಿತ್ತು!
ಗಮ್ಮತ್ತೋ ಗಮ್ಮತ್ತು
ಮೀನಿನ ಮಳೆಯೂ
ಬಿತ್ತೂ!
ಮುಸುವ ಬೆಕ್ಕು
ಮರಿಯ ತಲೆಗೆ
ಮರಿಗೆ ಹೊರಿಸಿ
ಹೊರಟಿತ್ತು!
ಗಮ್ಮತ್ತೋ ಗಮ್ಮತ್ತು
ಮೀನಿನ ಮಳೆಯೂ
ಬಿತ್ತೂ!
ಟಾಮಿ ನಾಯಿ
ಟಾರ್ಪಾಲ್ ತಂದು
ಟೆಂಟು ಜಡಿದೇ
ಕೂತಿತ್ತು!
ಗಮ್ಮತ್ತೋ ಗಮ್ಮತ್ತು
ಮೀನಿನ ಮಳೆಯೂ
ಬಿತ್ತೂ!
ಬೀರ ನರಿಯೂ
ಖಾರಾ ಕಡೆದು
ಸಾರು ಕುದಿಸಿಯೇ
ಬಿಟ್ಟಿತ್ತು!
ಗಮ್ಮತ್ತೋ ಗಮ್ಮತ್ತು
ಮೀನಿನ ಮಳೆಯೂ
ಬಿತ್ತೂ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.