ADVERTISEMENT

ಮೊಟ್ಟ ಮೊದಲ ಪತ್ರಿಕೆಗಳು...

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 19:30 IST
Last Updated 2 ಏಪ್ರಿಲ್ 2011, 19:30 IST

ಸುಮಾರು 1000 ವರ್ಷಗಳ ಹಿಂದೆ ವಿಶ್ವದ ಮೊಟ್ಟ ಮೊದಲ ಪತ್ರಿಕೆ ಚೀನಾದಲ್ಲಿ ಪ್ರಕಟವಾಯಿತು. ಅದರ ಹೆಸರು ‘ಚಿಂಗ್‌ಪಾವೊ’. ಅದರರ್ಥ ರಾಜಧಾನಿಯ ಸುದ್ದಿ. ಈ ಪತ್ರಿಕೆ ಮೂಲಕ ಸರ್ಕಾರ ಜನತೆಗೆ ಮುಖ್ಯ ಘಟನೆಗಳ ಬಗ್ಗೆ ಸಮಾಚಾರ ಕೊಡುತ್ತಿತ್ತು. ವಿಶ್ವದ ಎರಡನೇ ಪತ್ರಿಕೆ ಹೆಸರು ‘ಆಕ್ವಡಿಯನ್’. ಅಂದರೆ ‘ದಿನದ ಘಟನಾವಳಿ’ ಎಂದರ್ಥ. ಇವು ಇತಿಹಾಸದಲ್ಲಿ ದಾಖಲಾಗಿರುವ ವಿಶ್ವದ ಎರಡು ಪುರಾತನ ಪತ್ರಿಕೆಗಳು.

ವಿಶ್ವದ ಮೊಟ್ಟ ಮೊದಲ ದಿನಪತ್ರಿಕೆ ‘ಮಾರ್ನಿಂಗ್ ಪೋಸ್ಟ್’. 1772ರಲ್ಲಿ ಲಂಡನ್‌ನಲ್ಲಿ ಆರಂಭವಾಯಿತು. ಇದಾದ ನಂತರ ಮತ್ತೊಂದು ದೈನಿಕ ‘ಲಂಡನ್‌ಟೈಮ್ಸ್’ ಪ್ರಾರಂಭವಾಯಿತು. ಭಾರತದ ಮೊದಲ ಪತ್ರಿಕೆ ‘ದಿ ಬೆಂಗಾಲ್ ಗೆಜೆಟ್’ 1780ರಲ್ಲಿ ಆರಂಭವಾಯಿತು. ನಂತರ ಅದು ತನ್ನ ಹೆಸರನ್ನು ‘ದಿ ಇಂಗ್ಲಿಷ್‌ಮನ್’ ಎಂದು ಬದಲಿಸಿಕೊಂಡಿತು. 1971ರ ಅ.10ರಂದು ಪ್ರಕಟವಾದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಒಂದು ಸಂಚಿಕೆ 15 ವಿಭಾಗ, 972 ಪುಟ, 10 ಕೋಟಿ 20 ಲಕ್ಷ ಸಾಲು ಜಾಹೀರಾತು, 3.5  ಕೆ.ಜಿ ತೂಕ ಇತ್ತು. ಅದರ ಬೆಲೆ 50 ಸೆಂಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.