ಮೂಡಣದ ಕದ ತೆರೆದು
ರವಿ ಹೊರಗೆ ಬಂದನು
ಬೊಗಸೆ ಬೊಗಸೆಯ ತುಂಬ
ಬೆಳಕನ್ನು ತಂದನು
ರಕ್ಕಿಗಳ ಮೈ ಮುಟ್ಟಿ
‘ಹಾಡಿ ನೀವ್’ ಎಂದನು
ಹೂವುಗಳ ಅರಳಿಸುತ
ಪರಿಮಳದಿ ಮಿಂದನು
ಮಲಗಿದ್ದ ಕಂದನನು
ತಡವಿ ಇಂತೆಂದನು–
‘ನಿದ್ದೆ ಸಾಕೇಳು ಮಗು
ನಿನಗಾಗಿ ಬಂದೆನು
ಕುಣಿದು ಕಿಲ ಕಿಲ ನಗಲು
ಹೊಸ ಹುರುಪ ತಂದೆನು’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.