
ತುಂಟ ಬೆಕ್ಕು
ಹಂಟರ್ ಕೆಂಚ
ನಮ್ಮ ಮನೆಗೆ ಲೀಡರ್
ಉಳಿದ ಬೆಕ್ಕು
ನಾಯಿ ಮರಿಗೆ
ಅವನೇ ಮಾನಿಟರ್
ಅವನೇ ಮಾನಿಟರ್
ಲೀಡರ್ ಕೆಂಚ
ಪಕ್ಕ ಚುರುಕು
ಟಣ್ ಟಣ್ ನೆಗೆಯೋದೇ
ಓಡಿ ಬಂದು
ಮಡಿಲಲಿ ಮಲಗಲು
‘ದಡ್ಡ!’ ಬೀಳೋದೇ!
ಹಲ್ಲಿ ಕಪ್ಪೆ
ಜಿರಳೆ ಕಂಡರೆ
ಮಂಗ ಮಾಯಾನೇ
ರಾತ್ರಿ ಮಾತ್ರ
ನನ್ನ ರಗ್ಗಲಿ
ಬೆಚ್ಚಗೆ ಗೊರೆಕೇನೇ
ಬಾತುಕೋಳಿ
ನಿತ್ರಾಣ್‌ಸಿಂಗ
ತಮ್ಮ, ತಂಗಿ ಅವಗೆ
ಮಣ್ಣಲಿ ಆಡಲು
ಪಾಪು ನಾಯಿ
ಮುಸುವ ಬೆಕ್ಕು ಜೊತೆಗೆ
ಲೀಡರ್ ಕೆಂಚ
ಗೆಳೆಯ ನನಗೆ
ಆಟ ನಮ್ದೇನೇ
ನಂಗು ಅಮ್ಮಗು
ಅಪ್ಪಗು, ತಾತಗು
ಲೀಡರ್ ಅವನೇನೇ
ಲೀಡರ್ ಅವನೇನೇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.