

ಒಂದೇ ಒಂದು
 ಹೂವು ಇತ್ತು
 ಬೇಲಿಯ ಗಿಡದಲ್ಲಿ
ಎರಡು ಗೂಬೆ
 ಮಾತಾಡಿದ್ವು
 ಪಿಸುಪಿಸು ದನಿಯಲ್ಲಿ
ಮೂರು ಮುದ್ದು
 ಬೆಕ್ಕು ಮಲಗಿವೆ
 ಹೊಲೆಯ ಬುಡದಲ್ಲಿ
ನಾಲ್ಕು ನಾರಿನ
 ಹಕ್ಕಿ ಗೂಡು
 ತೆಂಗಿನ ಮರದಲ್ಲಿ
ಐದೇ ಐದು
 ಬೆರಳು ತಾನೇ
 ಕಾಲು ಕೈಯಲ್ಲಿ
ಆರು ಆಟದ
 ಗೋಲಿ ಕಲ್ಲು
 ಪಾಟಿ ಬಗಲಲ್ಲಿ
ಏಳು ಏಣಿಯ
 ಅಟ್ಟ  ಉಂಟು
 ಅಜ್ಜನ ಊರಲ್ಲಿ
ಎಂಟಿನ ನಂಟು
 ಹಬ್ಬದ ಗಂಟು
 ತಿಂದೇ ಮಜದಲ್ಲಿ
ಒಂಬತ್ತೆಂದರೆ
 ಜ್ವರ ಬತ್ತಂತೆ
 ನೆನೆದರ ಮಳೆಯಲ್ಲಿ
ಹತ್ತೇ ಹತ್ತು
 ಮಗ್ಗಿಯು ಗೊತ್ತು
 ಹೂಂ ಹೂಂ.... ಮತ್ತೆಲ್ಲಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.