ADVERTISEMENT

ಕುವೆಂಪು ಪದ ಸೃಷ್ಟಿ: ದಾನರುಚಿ

ಜಿ.ಕೃಷ್ಣಪ್ಪ
Published 15 ಅಕ್ಟೋಬರ್ 2023, 2:37 IST
Last Updated 15 ಅಕ್ಟೋಬರ್ 2023, 2:37 IST
<div class="paragraphs"><p>ಪ್ರಾರಬ್ಧಗಳಿಗೆ ಅಂತ್ಯಹಾಡಿದ ‘ಕುವೆಂಪು ಯುಗ’</p></div>

ಪ್ರಾರಬ್ಧಗಳಿಗೆ ಅಂತ್ಯಹಾಡಿದ ‘ಕುವೆಂಪು ಯುಗ’

   

ದಾನರುಚಿ (ನಾ). 1. ದಾನ ಕೊಡುವುದರಲ್ಲಿ ಇರುವ ಆಸಕ್ತಿ. 2. ದಾನ ಕೊಡಲು ಆಸಕ್ತಿಯುಳ್ಳ ವ್ಯಕ್ತಿ; ದಾನ ಮಾಡುವ ಅಪೇಕ್ಷೆಯುಳ್ಳ ವ್ಯಕ್ತಿ; ಉದಾರಿ.

ಪಂಚವಟಿಯಲ್ಲಿ ಪರ್ಣಕುಟಿಯ ಮುಂದೆ ಸೀತಾರಾಮರು ಕುಳಿತಿದ್ದಾಗ, ಮುಗಿಲತೇರಿನಿಂದ ಮಂಜುಮಯ ಸ್ತ್ರೀ ಮೂರ್ತಿ ಮೂಡಿ ಬರುತ್ತದೆ. ಅದನ್ನು ಕುತೂಹಲದಿಂದ ನೋಡುತ್ತಾರೆ. ವಿನಯ ವಯ್ಯಾರದಿಂದ ಬಂದ ಆ ಸ್ತ್ರೀ ರಾಮನಿಗೆ ‘ಕೋಸಲೇಶ್ವರ, ನಿನಗೆ ಸ್ವಾಗತ. ನಮ್ಮ ದಕ್ಷಿಣಾವನಿಗೆ ನೀನು ಅತಿಥಿ. ನಾನು ಲಂಕೇಶ್ವರನ ಸಹೋದರಿ ಚಂದ್ರನಖಿ’ ಎಂದು ಪರಿಚಯಿಸಿಕೊಳ್ಳುತ್ತಾಳೆ. ಪರಸ್ಪರ ಪರಿಚಯಾತ್ಮಕ ಮಾತುಕತೆಯಲ್ಲಿ ರಾಮಚಂದ್ರನು ‘ವ್ರತದ ಮುಡಿಗೆ ಮೈತ್ರಿ ಪರಿಮಳದ ಹೂ. ಅದಕ್ಕಾಗಿ ನಾನು ಹಗೆತನವನ್ನು ಅಳಿಸುತ್ತ, ಅಕ್ಕರೆಯನ್ನು ವರ್ಧಿಸಲು ದೊರೆ ಗದ್ದುಗೆಯನ್ನು ತೊರೆದು ಇಲ್ಲಿಗೆ ಬಂದಿರುವೆ’ ಎಂದು ತನ್ನ ಸಹಜ ನೇಹಭಾವವನ್ನು ವ್ಯಕ್ತಪಡಿಸುವನು.

ADVERTISEMENT

ಅದಕ್ಕೆ ಉತ್ತರಿಸುವ ಚಂದ್ರನಖಿಯ ನುಡಿಯಲ್ಲಿ ರಾಮನನ್ನು ‘ದಾನರುಚಿ’ ಎಂದು ಕರೆದು ತನಗೆ ಪತಿಯಾಗುವಂತೆ ಒತ್ತಾಯಿಸುವಳು. ಕುವೆಂಪು ಅವರು ರಾಮನ ದಾನದ ಬಗೆಗಿನ ಆಸಕ್ತಿ, ಉದಾರ ಗುಣವನ್ನು ‘ದಾನರುಚಿ’ ಎಂಬ ಪದ ಸೃಷ್ಟಿಸಿ ಅವನ ವ್ಯಕ್ತಿತ್ವದ ವಿಶೇಷ ಲಕ್ಷಣವನ್ನು ತಿಳಿಸಿದ್ದಾರೆ.


‘ನಿನ್ನವೋಲಾನುಮದನರಸಿ ಬಂದಿಹೆನಿಂದು

ನಿನ್ನೆಡೆಗೆ, ಕೇಳ್, ಸರಸಿ. ನೀಂ ಕರುಣಿ, ಧರ್ಮಮತಿ,

ದಾನರುಚಿ. ನಾಥನಿಲ್ಲದ ತರುಣಿಯಾಂ. ನನ್ನ ಬಾಳ್

ಬರಿಯ ಪಾಳ್...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.