ADVERTISEMENT

ಬೆಂಕಿ ನಾಲಿಗೆ

ಚಿತ್ರಕಥೆ

ಶ್ರೀನಿಧಿ ಡಿ.ಎಸ್.
Published 20 ಅಕ್ಟೋಬರ್ 2018, 19:30 IST
Last Updated 20 ಅಕ್ಟೋಬರ್ 2018, 19:30 IST
ಚಿತ್ರ/ವಿವರ: ಶ್ರೀನಿಧಿ ಡಿ.ಎಸ್.
ಚಿತ್ರ/ವಿವರ: ಶ್ರೀನಿಧಿ ಡಿ.ಎಸ್.   

ಶ್ರೀಲಂಕಾದಲ್ಲಿ ಸಂಸ್ಕೃತಿ, ಆಚಾರ ವಿಚಾರಗಳು ಭಾರತದಲ್ಲಿನ ಪದ್ಧತಿಗಳ ಮುಂದುವರಿಕೆಯಂತೆಯೇ ಇವೆ. ಇಲ್ಲಿನ ಜನಪದ ನೃತ್ಯಗಳು, ಬಳಸುವ ವಾದ್ಯಗಳು, ಸಂಗೀತದ ಪರಿಕರಗಳು ಕೂಡ ನಮ್ಮದೇ ತಮಟೆ, ಮದ್ದಳೆ, ಚಂಡೆಗಳ ಅಣ್ಣತಮ್ಮಂದಿರಂತೆ ಕಾಣುತ್ತವೆ. ಇಲ್ಲಿನ ಜನಪದ ನೃತ್ಯಗಳು, ಭಾರತದ ಭರತನಾಟ್ಯ, ಕಥಕ್ , ಯಕ್ಷಗಾನ ಕಥಕ್ಕಳಿಗಳ ಟಿಸಿಲುಗಳಂತೆಯೇ ಇವೆ.

ಈ ಚಿತ್ರವನ್ನು ತೆಗೆದಿದ್ದು ಶ್ರೀಲಂಕಾದ ಕ್ಯಾಂಡಿಯಲ್ಲಿ. ಗಿನಿ ಸಿಸಿಲ ಎನ್ನುವ ಶ್ರೀಲಂಕಾದ ಜನಪದ ನೃತ್ಯ ಪ್ರಕಾರ ಇದು. ಅಲ್ಲಿಯ ಮೂಲ ನೀವಾಸಿಗಳ ಜನಪದ ನಂಬಿಕೆಯ ನೃತ್ಯವಿದು. ಮೂರು ನಾಲ್ಕು ಮಂದಿ ಹಿಮ್ಮೇಳ ಕಲಾವಿದರು ಮದ್ದಳೆಯಂಥ ವಾದ್ಯವನ್ನು ಲಯಬದ್ಧವಾಗಿ ಬಾರಿಸುತ್ತಿರುತ್ತಾರೆ. ಕಲಾವಿದನೊಬ್ಬ ಬೆಂಕಿಯ ಪುಟ್ಟ ಪುಟ್ಟ ದೊಂದಿಗಳ ಜತೆಗೆ ನೃತ್ಯ ಮಾಡುತ್ತ, ಅದನ್ನು ತನ್ನ ಮೈಮೇಲೆಲ್ಲ ಓಡಾಡಿಸಿಕೊಳ್ಳುತ್ತ ಕೊನೆಗೆ ಬಾಯಿಯೊಳಗೂ ಹಾಕಿಕೊಂಡು ನುಂಗಿ, ನೆರೆದ ಪ್ರೇಕ್ಷಕರನನ್ನು ಅಚ್ಚರಿಗೀಡು ಮಾಡುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT