ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ ವಿನೋದ್: ಸಮಾಜಸೇವೆಗೆ ಮುಡಿಪು

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 6:01 IST
Last Updated 1 ಜನವರಿ 2022, 6:01 IST
ಎಸ್‌. ವಿನೋದ
ಎಸ್‌. ವಿನೋದ   

ಇವರು ಎಸ್. ವಿನೋದ್. ‘ವಿನೋದ್ ಕರ್ತವ್ಯ’ ಎಂದೇ ಗುರುತಿಸಲಾಗುತ್ತಿರುವ ಈ ಯುವಕ, ಡಿಆರ್‌ಡಿಒದಲ್ಲಿ ತಾಂತ್ರಿಕ ಅಧಿಕಾರಿ. ‘ಬೆಂಗಳೂರು ಹುಡುಗರು ತಂಡ’ ಮತ್ತು ‘ಕರ್ತವ್ಯ ತಂಡ’ ಸ್ಥಾಪಿಸಿ, ವಿವಿಧ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನ ಸರ್ಕಾರಿ ಶಾಲೆಗಳಿಗೆ ಪ್ರತಿ ಶನಿವಾರ ಕಂಪ್ಯೂಟರ್‌, ಸ್ಪೋಕನ್‌ ಇಂಗ್ಲಿಷ್‌ ಮತ್ತು ವ್ಯಕ್ತಿತ್ವ ವಿಕಸನ ಕುರಿತಾದ ತರಗತಿಗಳನ್ನು ಇವರ ‘ಕರ್ತವ್ಯ ತಂಡ’ದ 40 ಸದಸ್ಯರು ತೆಗೆದುಕೊಳ್ಳುತ್ತಾರೆ. ಜತೆಗೆ, ಅಗತ್ಯ ಇರುವ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ನೆರವಾಗಿದ್ದಾರೆ. ಈಗಾಗಲೇ ಎಂಟು ಶಾಲೆಗಳಲ್ಲಿ ಕಂಪ್ಯೂಟರ್‌ ಪ್ರಯೋಗಾಲಯ ಮತ್ತು ಐದು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸ್ಥಾಪಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಮೊಳೆ ಮುಕ್ತ ಅಭಿಯಾನವವನ್ನು ಹಮ್ಮಿಕೊಳ್ಳುವ ಮೂಲಕ ವೃಕ್ಷಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಮೊಳೆಯಿಂದಾಗುವ ಹಾನಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನದಲ್ಲಿ ಸಾಗಿದ್ದಾರೆ.

ADVERTISEMENT

2020ರ ನವೆಂಬರ್‌ 15ರಿಂದ ಅಭಿಯಾನ ಆರಂಭಿಸಲಾಗಿದ್ದು, 1300 ಮರಗಳಿಂದ 12 ಸಾವಿರಕ್ಕೂ ಹೆಚ್ಚು ಮೊಳೆ ಮತ್ತು 8ಕೆ.ಜಿ. ಸ್ಪ್ಯಾಪಲ್‌ ಪಿನ್‌ಗಳನ್ನು ಇವರ ತಂಡದ ಸದಸ್ಯರು ಕಿತ್ತು ಹಾಕಿದ್ದಾರೆ. ಜತೆಗೆ, 12 ವಾರ್ಡ್‌ಗಳಲ್ಲಿ ಮರಗಳಿಗೆ ಪೋಸ್ಟರ್‌ ಅಂಟಿಸಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಭಿಕ್ಷಾಟನೆಯಂತಹ ಸಾಮಾಜಿಕ ಸಮಸ್ಯೆ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಹೆಸರು: ಎಸ್‌. ವಿನೋದ್‌
ವೃತ್ತಿ: ಡಿಆರ್‌ಡಿಒದಲ್ಲಿ ತಾಂತ್ರಿಕ ಅಧಿಕಾರಿ
ಸಾಧನೆ: ವಿಜ್ಞಾನಿ ಮತ್ತು ಸಾಮಾಜಿಕ ಚಟುವಟಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.