ADVERTISEMENT

ಮೊದಲ ಓದು : ಶಾವೋಲಿನ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2013, 19:59 IST
Last Updated 26 ಜನವರಿ 2013, 19:59 IST
ಮೊದಲ ಓದು : ಶಾವೋಲಿನ್
ಮೊದಲ ಓದು : ಶಾವೋಲಿನ್   

ಶಾವೋಲಿನ್
ಮೂಲ: ರಾಮೇಂದ್ರಕುಮಾರ್; ಕನ್ನಡಕ್ಕೆ: ಕೆ. ಶಿವಲಿಂಗಪ್ಪ ಹಂದಿಹಾಳು
ಪು: 112; ಬೆ: ರೂ. 60
ಪ್ರ: ಅಭಿನವ ಪ್ರಕಾಶನ, ನಂ. 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560 040

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಅಳಿವಿನಂಚಿಗೆ ಬಂದು ನಿಂತಿರುವ ಹೊತ್ತಿನಲ್ಲಿ ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳ ಕಥಾಲೇಖಕ ರಾಮೇಂದ್ರ ಕುಮಾರ್ ಇಂಗ್ಲಿಷ್‌ನಲ್ಲಿ ಬರೆದಿರುವ ಕೆಲವು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇಲ್ಲಿರುವ ಕಥೆಗಳೆಲ್ಲ ಸಮಕಾಲೀನ ವಸ್ತುವನ್ನು ಆಧರಿಸಿ ಬರೆದವು. ಹೊರ ಜಗತ್ತನ್ನು ನೋಡುತ್ತಲೇ ಒಳಜಗತ್ತನ್ನು ರೂಪಿಸಿಕೊಳ್ಳುವ ಮಕ್ಕಳ ಮನಸ್ಸಿನ ಬೆಳವಣಿಗೆಗೆ ನೀರು, ಗೊಬ್ಬರವಾಗುವಂತೆ ಈ ಕಥೆಗಳು ಮೈತಳೆದಿವೆ.

ಇಲ್ಲಿನ `ಶಾವೋಲಿನ್', `ರಿಯಾಳ ಹಂಬಲ', `ಪಪ್ಪಿಗಳ ಒಡನಾಟ', `ರಾಕಿ' ಮತ್ತಿತರ ಕಥೆಗಳು ಮಕ್ಕಳ ಕಲ್ಪನೆಯನ್ನು, ಸಂವೇದನೆಯನ್ನು ಹಿಗ್ಗಿಸಬಲ್ಲವು. ಮಕ್ಕಳು ಮಾತ್ರವಲ್ಲದೆ ಹಿರಿಯರೂ ಕೂಡ ಆಕಳಿಸದೆ ಕೇಳುವಂತೆ ಈ ಕಥೆಗಳ ನಿರೂಪಣೆಯಿದೆ. ಮಕ್ಕಳ ಪರಿಚಿತ ಜಗತ್ತಿನಲ್ಲಿ ಹುಟ್ಟಿ ಬೆಳೆಯುವ ಇವನ್ನು ಪುಟ್ಟ ವಾಕ್ಯಗಳಲ್ಲಿ, ಸರಳವಾಗಿ ಅನುವಾದಿಸಲಾಗಿದೆ.

ಪುರಾಣ, ಜಾನಪದ, ಮಹಾಕಾವ್ಯ, ಪ್ರಾಣಿಪಕ್ಷಿಗಳ ಕಥೆಗಳನ್ನು ಓದಿ ಬೇಸರಗೊಂಡಿರುವ ಮಕ್ಕಳಿಗೆ ಈ ಕಥೆಗಳು ಹೊಸದಿಕ್ಕುಗಳನ್ನು ತೆರೆಯಬಲ್ಲವು. ಕೊಂಚ ಪ್ರಬುದ್ಧರಾದ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಇವು ಭಿನ್ನ ಎನ್ನಿಸುವುದು ಹೊಸ ಕಾಲದ ಹೊಸ ಮಕ್ಕಳನ್ನು ಉದ್ದೇಶಿಸಿವೆ ಎನ್ನುವ ಕಾರಣದಿಂದಾಗಿ.
                               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.