ಅಂಬೇಡ್ಕರ್ ಬರಹ ಮತ್ತು ಅವರ ಕುರಿತ ಬೇರೆ ಬೇರೆ ಲೇಖಕರು ರೂಪಿಸಿದ ಬರಹಗಳನ್ನೇ ಮೂಲ ಆಕರವನ್ನಾಗಿ ಇಟ್ಟುಕೊಂಡು ಈ ಕೃತಿಯನ್ನು ಎಂ.ವೆಂಕಟಸ್ವಾಮಿ ರಚಿಸಿದ್ದಾರೆ. ‘ಕೋಮುಭಾವನೆಗಳು ರಾಷ್ಟ್ರೀಯ ಭಾವೈಕ್ಯತೆಗೆ ಅಪಾಯ’ ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಈ ಸಂಗತಿ ದಾಖಲಿಸುವ ಲೇಖಕರು, ಭ್ರಾತೃತ್ವ ನೆಲೆಯ ಭಾರತೀಯ ರಾಷ್ಟ್ರೀಯತೆ ಬಾಬಾಸಾಹೇಬರ ಕನಸಾಗಿತ್ತು ಎನ್ನುವ ವಿವರವನ್ನು ಇಲ್ಲಿ ನೀಡುತ್ತಾರೆ.
ಅಂಬೇಡ್ಕರ್ ಅವರ ಬಾಲ್ಯ ಮತ್ತು ವಿದ್ಯಾಭ್ಯಾಸದ ವಿವರದಿಂದ ಆರಂಭವಾಗುವ ಈ ಕೃತಿ ಅವರ ಜೀವನದಲ್ಲಿ ಸಂಭವಿಸುವ ಮಹತ್ವದ ಕೆಲವು ಘಟನೆಗಳನ್ನು ದಾಖಲಿಸುತ್ತದೆ. ಆ ಮೂಲಕ ಅಂಬೇಡ್ಕರ್ ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದೆ.
ಜೈ ಭೀಮ್ ಕೃತಿ ‘ಚೌಡಾರ್ ಕೆರೆಯ ನೀರಿನ ಸ್ಪರ್ಶ’, ‘ಸೈಮನ್ ಕಮಿಷನ್ ಮುಂದೆ ವಿಷಯ ಮಂಡನೆ’, ‘ದುಂಡುಮೇಜಿನ ಸಮ್ಮೇಳನಗಳು’, ‘ ಗಾಂಧೀಜಿ ನಿರಶನ ಮತ್ತು ಪೂನಾ ಒಡಂಬಡಿಕೆ’, ಭಾರತೀಯ ಸಾಂವಿಧಾನಿಕ ಕರಡು ರಚನಾ ಸಭೆ ಮತ್ತು ಚರ್ಚೆಗಳು’, ‘ ಭಾರತ ಪಾಕಿಸ್ತಾನ ವಿಭಜನೆ ಮತ್ತು ಗಾಂಧಿ ಹತ್ಯೆ’, ‘ವೃದ್ಧಾಪ್ಯ, ಅನಾರೋಗ್ಯ ಮತ್ತು ಅಂತಿಮ ದಿನಗಳು’– ಹೀಗೆ 25 ಅಧ್ಯಾಯಗಳನ್ನು ಒಳಗೊಂಡಿದೆ.
ಅಂಬೇಡ್ಕರ್ ಅವರ ವೃತ್ತಿ ಬದುಕಿನ ಅಡ್ಡಿ ಆತಂಕಗಳ ನಡುವೆ ಉನ್ನತ ವ್ಯಾಸಂಗದ ಸಾಧನೆಯನ್ನು ಪ್ರಸ್ತಾಪಿಸುತ್ತಾರೆ. ಕಾರ್ಮಿಕ ಪಕ್ಷದ ಸ್ಥಾಪನೆ, ಪತ್ರಿಕೆಗಳ ಸಂಪಾದನೆ, ಸಾಮಾಜಿಕ ಚಳವಳಿ, ಹೋರಾಟವೂ ಸೇರಿದಂತೆ ಸಕ್ರಿಯ ರಾಜಕಾರಣದ ಮುಖವನ್ನೂ ಲೇಖಕ ನಿರೂಪಿಸಿದ್ದಾರೆ.
ಜೈ ಭೀಮ್: ಡಾ. ಬಿ.ಆರ್. ಅಂಬೇಡ್ಕರ್ ಜೀವನ ಚರಿತ್ರೆ
ಲೇ: ಎಂ. ವೆಂಕಟಸ್ವಾಮಿ
ಪ್ರ: ನವ ಕರ್ನಾಟಕ ಪಬ್ಲಿಕೇಷನ್ಸ್
ಸಂ: 080–22161900
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.