ADVERTISEMENT

‘ಬರಗೂರ್ ಬುಕ್’: ಕನ್ನಡದಲ್ಲೊಂದು ವಿಶಿಷ್ಟ ಪುಸ್ತಕ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 23:44 IST
Last Updated 1 ಫೆಬ್ರುವರಿ 2025, 23:44 IST
   

ಬರಗೂರು ರಾಮಚಂದ್ರಪ್ಪ ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಚಿಂತಕರು; ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಚಳವಳಿ‌ಗೆ ತಾತ್ವಿಕ ಚೌಕಟ್ಟನ್ನು ನೀಡಿದವರಲ್ಲಿ ಒಬ್ಬರು. ಕನ್ನಡ ಪ್ರಮುಖ ಲೇಖಕರಲ್ಲಿ ಒಬ್ಬರಾದ ಅವರು ಸಾಹಿತ್ಯದ ಅರ್ಥವಂತಿಕೆ, ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಆಳವಾಗಿ ಚಿಂತಿಸಿದವರು. ಸಮಾಜ, ಭಾಷೆ, ಸಾಹಿತ್ಯ, ಧರ್ಮ, ಇತಿಹಾಸ, ಆರ್ಥಿಕತೆ, ಶಿಕ್ಷಣ, ಸಿನಿಮಾ, ರಂಗಭೂಮಿ, ಚಳವಳಿ ಮುಂತಾದ ವಿಷಯಗಳ ಬಗ್ಗೆ ಒಳನೋಟಗಳುಳ್ಳ ಲೇಖನಗಳನ್ನು ಅವರು ಬರೆದಿದ್ದಾರೆ.

ಅವರ ವಿವಿಧ ಬರಹಗಳಲ್ಲಿನ ಆಯ್ದ ನುಡಿಗಟ್ಟುಗಳನ್ನು ಯಲ್ಲಪ್ಪ ಹಿಮ್ಮಡಿ ‘ಬರಗೂರ್ ಬುಕ್’ ಎನ್ನುವ ಹೆಸರಿನಲ್ಲಿ ಸಂಗ್ರಹಿಸಿದ್ದಾರೆ. ಸಾಹಿತ್ಯ–ಪರಂಪರೆ, ಕನ್ನಡ, ಸಂಸ್ಕೃತಿ, ಶಿಕ್ಷಣ, ಸಿನಿಮಾ, ಪ್ರಜಾಪ್ರಭುತ್ವ, ಚಳವಳಿ, ಸಾಮಾಜಿಕ ನ್ಯಾಯ ಧಾರ್ಮಿಕತೆ–ಸೌಹಾರ್ದತೆ ಮುಂತಾದ ವಿಚಾರಗಳಿಗೆ ಸಂಬಂಧಿಸಿದ ನುಡಿಗಟ್ಟುಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ನೀಡಲಾಗಿದೆ. ಬರಗೂರು ಅವರ ವಿಚಾರಶೀಲ ನುಡಿಗಟ್ಟುಗಳನ್ನು, ಘೋಷವಾಕ್ಯಗಳ ರೂಪದಲ್ಲಿರುವ ಚಿಂತನೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. 

ಪುಸ್ತಕದಲ್ಲಿರುವ ನುಡಿಗಟ್ಟುಗಳು ಸಮಾಜಕ್ಕೆ ಅರಿವಿನ ಆಕರಗಳಾಗಬಲ್ಲವು. ಯುವಜನತೆಗೆ ವಿವೇಕದ ಮಾರ್ಗದರ್ಶನ ಮಾಡಿ, ಚಿಂತನೆಗೆ ಒಡ್ಡಬಲ್ಲವು ಎನ್ನುವ ಆಶಯ ಲೇಖಕರದ್ದು.

ADVERTISEMENT

ಕನ್ನಡದ ಮಟ್ಟಿಗೆ ಇದು ವಿಶಿಷ್ಟ ಪ್ರಯೋಗ. ಕನ್ನಡದ ಮಹತ್ವದ ಸಮಕಾಲೀನ ಲೇಖಕರೊಬ್ಬರ ನುಡಿಗಟ್ಟುಗಳನ್ನು ಸಂಗ್ರಹಿಸಿ ನೀಡಿರುವುದು ಅವರ ವಿಚಾರಧಾರೆಯನ್ನು ಜನರಿಗೆ–ಮುಖ್ಯವಾಗಿ ಹೊಸ ತಲೆಮಾರಿಗೆ ಮುಟ್ಟಿಸುವ ಪ್ರಯತ್ನವಾಗಿದೆ. 

ಬರಗೂರ್‌ ಬುಕ್‌

ಸಂಪಾದಕ: ಯಲ್ಲಪ್ಪ ಹಿಮ್ಮಡಿ

ಪ್ರ:ಜನ ಪ್ರಕಾಶನ

ಸಂ: 9632329955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.