ADVERTISEMENT

ಕಪಾಟು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:45 IST
Last Updated 31 ಆಗಸ್ಟ್ 2019, 19:45 IST
ಕಪಾಟು
ಕಪಾಟು   

ಮಹಾನದಿಯ ಉಗಮ

ಪ್ರೊ.ಎಂ. ನಾರಾಯಣ ಸ್ವಾಮಿ

ಬುಡ್ಡಿದೀಪ ಪ್ರಕಾಶನ, ಆಜೀವಕ ಆವರಣ

ADVERTISEMENT

ಉಸ್ಮಾನ್‌ ತಾತನ ದರ್ಗಾದ ಎದುರು

ಪಾಪರಾಜನಹಳ್ಳಿ, ಮಡೇರಹಳ್ಳಿ ಅಂಚೆ

ತೇರಳ್ಳಿ ಬೆಟ್ಟ, ಕೋಲಾರ

ಬೆಲೆ: ₹70

ಪುಟ: 80

ಅಂಬೇಡ್ಕರ್‌ವಾದದ ಚಿಂತನೆಯಲ್ಲಿ ಪಡಿಮೂಡಿದ ಲೇಖನಗಳು ಇವು ಎನ್ನಲು ಯಾವುದೇ ಅಡ್ಡಿ ಇಲ್ಲ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖಕರ ಲೇಖನಗಳು ಕೃತಿ ರೂಪ ಪಡೆದಿವೆ. ಅಂಬೇಡ್ಕರ್‌ ಬದುಕು– ಬರಹ– ಭಾಷಣಗಳನ್ನು ಅರಿಯಲು ಇದೊಂದು ಪ್ರವೇಶಿಕೆಯಾಗಬಲ್ಲದು. ‘ಭೀವಾ ಅಂಬೇಡ್ಕರ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಆದದ್ದು: ಮಹಾನದಿಯ ಉಗಮ’ ಶೀರ್ಷಿಕೆಯೂ ಕೃತಿಯ ಜೀವಾಳವನ್ನು ಧ್ವನಿಸುತ್ತದೆ. ಲೇಖಕರ ಒಂಬತ್ತು ಲೇಖನಗಳ ಜತೆಗೆ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ 1954ರ ಅಕ್ಟೋಬರ್‌ 28ರಂದು ಮುಂಬೈನ ಪುರಂದರ ಸ್ಟೇಡಿಯಂನಲ್ಲಿ ಮಾಡಿದ ಐತಿಹಾಸಿಕ ಭಾಷಣದ ಅನುವಾದವನ್ನುಹತ್ತನೇ ಅಧ್ಯಾಯವಾಗಿ ಕೃತಿಯಲ್ಲಿ ಸೇರಿಸಿಕೊಂಡಿದ್ದಾರೆ.

ಅತ್ಯುತ್ತಮ ಸಣ್ಣ ಕಥೆಗಳು

ಸಂಪಾದಕರು: ಕೆ.ನರಸಿಂಹಮೂರ್ತಿ

ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು– 560018

ಪುಟ: 136

ಬೆಲೆ: 80

ವಿಮರ್ಶಕ ಕೆ.ನರಸಿಂಹಮೂರ್ತಿ ಅವರು ಕನ್ನಡದ ಶ್ರೇಷ್ಠ ಕಥೆಗಳಲ್ಲಿ ಆಯ್ದ 12 ಕಥೆಗಳನ್ನು ಈ ಕೃತಿಯಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಈ ಕೃತಿ ಈಗ ಮರುಮುದ್ರಣಗೊಂಡು ಓದುಗರ ಕೈಸೇರುತ್ತಿದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಅತ್ಯಂತ ‌ಉಪಯುಕ್ತವಾದ ಕೃತಿ. ಅಲ್ಲದೆ, ಕಥಾಪ್ರಿಯರ ಓದುವ ಆಸಕ್ತಿಯನ್ನು ತಣಿಸುವಷ್ಟು ಸಾಮರ್ಥ್ಯ ಈ ಕಥೆಗಳಲ್ಲಿವೆ. ಬಸವರಾಜಕಟ್ಟೀಮನಿಯವರ ‘ಗಿರಿಜಾ ಕಂಡ ಸಿನಿಮಾ’, ಚದುರಂಗರ ‘ನಾಲ್ಕು ಮೊಳ ಭೂಮಿ’, ಅನುಪಮಾ ಅವರ ‘ದೇವರೇ ಬರಲಿಲ್ಲ’, ಎಲ್‌.ಎಸ್‌.ಶೇಷಗಿರಿರಾವ್‌ ಅವರ ‘ಮುಯ್ಯಿ’, ಸದಾಶಿವ ಅವರ ‘ನಲ್ಲಿಯಲ್ಲಿ ನೀರು ಬಂದಿತು!!!’ ಕಥೆಗಳು ಮತ್ತೆ ಮತ್ತೇ ಓದಿಸಿಕೊಳ್ಳುತ್ತವೆ. ಅಲ್ಲಲ್ಲಿಕಾಗುಣಿತ ದೋಷಗಳು ಉಳಿದಿರುವುದನ್ನು ಹೊರತುಪಡಿಸಿದರೆ, ಪ್ರತಿಯೊಬ್ಬರ ಮನೆಯ ಕಪಾಟಿನಲ್ಲಿ ಇರಲೇಬೇಕಾದ ಕೃತಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.