ADVERTISEMENT

ಕಪಾಟು

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 19:30 IST
Last Updated 25 ಜನವರಿ 2020, 19:30 IST
ಅಶ್ವಗಂಧಿ
ಅಶ್ವಗಂಧಿ   

ನೃಪತುಂಗ ಚಕ್ರವರ್ತಿಯ ಮರಣದ ನಂತರ ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಘಟಿಸಿರಬಹುದಾದ ಸಂಗತಿಗಳ ಒಟ್ಟು ಚಿತ್ರಣ ಅಶ್ವಗಂಧಿ ನಾಟಕ. ಅಶ್ವಗಂಧಿ‌ಯದು ಕುತೂಹಲಕಾರಿಯಾದ ಪಾತ್ರ. ಎಲ್ಲ ಶೋಷಿತ ಹೆಂಗಸರ ಪ್ರತಿನಿಧಿಯಾಗಿ, ಪುರುಷಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರಜ್ಞೆಯಾಗಿ ಹಲವು ಮುಖ್ಯ ಆಶಯಗಳನ್ನು ಈಕೆ ಪ್ರತಿನಿಧಿಸುತ್ತಾಳೆ.

ಇತಿಹಾಸದ ಎಳೆ ಹಿಡಿದು ವರ್ತಮಾನದ ತವಕ, ತಲ್ಲಣಗಳನ್ನು ಪ್ರತಿಬಿಂಬಿಸ ಹೊರಟ ಪ್ರಯತ್ನ ವಿಶಿಷ್ಟವಾದುದು. ನೃಪತುಂಗ ಎಂಬ ಪ್ರತಿಮೆಯ ಮೂಲಕ ಪ್ರಸ್ತುತ ರಾಜಕೀಯ ಹುನ್ನಾರಗಳು, ಇಲ್ಲದವರ ನೋವು, ನಿಟ್ಟುಸಿರು ಅಂತೆಯೇ ಅಧಿಕಾರದ ಕಚ್ಚಾಟಗಳನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಇಲ್ಲಿನ ಎಲ್ಲ ಪಾತ್ರಗಳು ಸಮುದಾಯದ ಜೀವಂತ ಪ್ರತಿಮೆಗಳೆಂಬುದರಲ್ಲಿ ಎರಡು ಮಾತಿಲ್ಲ. ಅಧಿಕಾರ ಲಾಲಸೆ, ಸ್ವಾರ್ಥ, ಸ್ವಜನ ಪಕ್ಷಪಾತ; ಸಾಮಾಜಿಕ ಮೌಲ್ಯಗಳ ಗಂಟಲನ್ನು ಅದುಮಿ ಹಿಡಿಯುತ್ತವೆ ಎಂಬುದು ಇತಿಹಾಸದ ಪುಟಗಳಿಂದ ವೇದ್ಯ. ಇಲ್ಲಿ‌ ಇತಿಹಾಸ ನೆಪಮಾತ್ರ.‌ ಮಿಕ್ಕಂತೆ ಚರ್ಚಿತ ಎಲ್ಲ ವಿಷಯ, ಘಟನೆಗಳು ವರ್ತಮಾನದ ಪ್ರತಿಬಿಂಬ. ಅಶ್ವಗಂಧಿ‌ ಅದಕ್ಕೆ ಹಿಡಿದ ಕನ್ನಡಿ. ರಾಜಾಡಳಿತ, ಪ್ರಜಾತಂತ್ರಗಳ ನಡುವಣ ತಿಕ್ಕಾಟದಲ್ಲಿ ಜನಸಾಮಾನ್ಯರ ಬದುಕು ನಿಕೃಷ್ಟವಾದರೆ, ಜೀವನ ಮೌಲ್ಯಗಳು ನಶಿಸು
ತ್ತವೆ. ಬಂಧ, ಭಾವಗಳು ಬೆಲೆ ಕಳೆದುಕೊಂಡು‌ ಮೂಲೆ ಗುಂಪಾಗುತ್ತವೆ ಎಂಬುದರ ಸಾಕ್ಷಿಪ್ರಜ್ಞೆ ಈ ನಾಟಕ.v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT