ADVERTISEMENT

ಪುಸ್ತಕ ವಿಮರ್ಶೆ: ಕಾಡುವ ಪಾತ್ರಗಳ ‘ಪ್ರೇಮಪತ್ರ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 19:31 IST
Last Updated 11 ಡಿಸೆಂಬರ್ 2021, 19:31 IST
ಪ್ರೇಮಪತ್ರ
ಪ್ರೇಮಪತ್ರ   

ಪ್ರೇಮಪತ್ರ

ವೈಕಂ ಮುಹಮ್ಮದ್‌ ಬಷೀರ್‌ ಕತೆಗಳು

ಅನುವಾದ: ಮೋಹನ ಕುಂಟಾರ್‌

ADVERTISEMENT

ಪ್ರ: ಯಾಜಿ ಪ್ರಕಾಶನ

ಸಂ: 9448722800

ವೈಕಂ ಮುಹಮ್ಮದ್‌ ಬಷೀರ್‌ ಅವರ ಇಪ್ಪತ್ತಮೂರು ಮಲಯಾಳಂ ಕಥೆಗಳ ಅನುವಾದ ಕೃತಿ ‘ಪ್ರೇಮಪತ್ರ’. ಈ ಮೂಲಕ ಮೋಹನ ಕುಂಟಾರ್‌ ಎರಡನೇ ಬಾರಿಗೆ ಬಷೀರ್‌ ಅವರ ಕಥೆಗಳ ಅನುವಾದ ಸಂಕಲನವನ್ನು ಕನ್ನಡಕ್ಕೆ ತಂದಿದ್ದಾರೆ. ಕರ್ನಾಟಕ–ಕೇರಳ ಗಡಿಯಾದ ಕಾಸರಗೋಡಿನ ಮೋಹನ ಅವರು, ಕನ್ನಡಿಗರಿಗೆ ಮಲಯಾಳಂ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪರಿಚಯಿಸುತ್ತಾ ಬಂದಿದ್ದಾರೆ. ಈ ಹಿಂದೆ 1999ರಲ್ಲಿ ‘ಬಶೀರ್‌ ಕತೆಗಳು’ ಎಂಬ ಶೀರ್ಷಿಕೆಯಲ್ಲಿ ಮೋಹನ ಅವರು ಬಷೀರ್‌ ಅವರ ಹತ್ತು ಕಥೆಗಳನ್ನು ಅನುವಾದ ಮಾಡಿದ್ದರು. ಇದೀಗ ಈ ಅನುವಾದಗಳನ್ನು ಪರಿಷ್ಕರಿಸಿ, ಹೊಸದಾಗಿ 13 ಕಥೆಗಳನ್ನು ಅನುವಾದಿಸಿ ‘ಪ್ರೇಮಪತ್ರ’ ಎಂಬ ಹೊಸ ಸಂಕಲನಕ್ಕೆ ಸೇರಿಸಿದ್ದಾರೆ.

ಇಲ್ಲಿ ಬದುಕಿನ ಹೋರಾಟ, ಸಾಮಾಜಿಕ ಸಮಸ್ಯೆ, ಲೌಕಿಕ ಬದುಕಿನ ಸಂಬಂಧ ಕಟ್ಟಿಕೊಡುವ ಕಥೆಗಳಿವೆ, ಹೀಗೆನ್ನುವುದಕ್ಕಿಂತ ಕಥೆ ಇರುವುದೇ ಜನ ಸಾಮಾನ್ಯರದ್ದು ಎನ್ನಬಹುದು. ಪ್ರೀತಿ, ಪ್ರೇಮಕ್ಕೆ ಹಲವು ಆಯಾಮಗಳು ಹಲವು ಕಥೆಗಳಲ್ಲಿ ಕಾಣಸಿಗುತ್ತವೆ. ಕೆಲವೆಡೆ ಮೊನಚಾದ ವಿನೋದದ ಧಾಟಿಯೂ ಇದೆ. ತಮ್ಮದೇ ನೋವು ನಲಿವುಗಳಿಗೂ ಅಕ್ಷರರೂಪ ನೀಡಿ ತಮ್ಮ ಬದುಕನ್ನೂಬಷೀರ್‌ ಇಲ್ಲಿ ದಾಖಲಿಸಿದ್ದಾರೆ. ಮೂಲಲೇಖಕರ ಭಾಷೆ, ಶೈಲಿಯನ್ನು ಉಳಿಸಿಕೊಳ್ಳುವ ಮೂಲಕ ಆ ಕಥೆಗಳಲ್ಲಿ ಹೆಚ್ಚಾಗಿರುವ ಸಂಸ್ಕೃತ, ಆಂಗ್ಲಮಿಶ್ರಿತ ಮಲಯಾಳಂ ಹಾಗೂ ಸಾಂಸ್ಕೃತಿಕವಾಗಿ ವಿಶಿಷ್ಟ ಅರ್ಥ ಹೊಂದಿರುವ ಪದಗಳ ಸೊಗಡನ್ನು ಮೋಹನ್‌ ಅವರು ಉಳಿಸಿಕೊಂಡಿದ್ದಾರೆ. ಹೀಗಾಗಿ ಅನುವಾದವು ಮಲಯಾಳಂ ಕಥೆಗೆ ಬಹಳ ಹತ್ತಿರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.