ADVERTISEMENT

ಮೊದಲ ಓದು: ಲಾಡೆನ್‌ ಕೊಂದು ಏನು ಸಿಕ್ಕಿತು?

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 19:31 IST
Last Updated 12 ಮಾರ್ಚ್ 2022, 19:31 IST
ಆಪರೇಷನ್‌ ತ್ರಿಶೂಲ
ಆಪರೇಷನ್‌ ತ್ರಿಶೂಲ   

ವಿಶ್ವ ವ್ಯಾಪಾರ ಕೇಂದ್ರದ ಕಟ್ಟಡವನ್ನು ಅಲ್‌ ಕೈದಾ ಉಗ್ರರು ಉರುಳಿಸಿಅಮೆರಿಕದ ಹೃದಯಕ್ಕೇ ಬಲವಾದ ಏಟು ಕೊಟ್ಟ, ಜಗತ್ತನ್ನೇ ಒಂದು ಕ್ಷಣ ತಲ್ಲಣಗೊಳಿಸಿದ ಘಟನೆಯ ಹಿನ್ನೆಲೆ, ಮುನ್ನೆಲೆಯನ್ನು ಕಥನ ರೂಪದಲ್ಲಿ ವಿವರಿಸಿದೆ ಈ ಕೃತಿ. ಹಾಗೆಂದು ಇದು ಕಥೆಯ ನಿರೂಪಣೆ ಅಲ್ಲ. ಒಂದು ಘೋರ ಘಟನೆಗೂ ಮುನ್ನ ಮತ್ತು ಆ ಬಳಿಕ ನಡೆದ ಘಟನಾವಳಿಗಳನ್ನು ಸಾಮಾನ್ಯ ಕುತೂಹಲಿಗೂ ತಲುಪಿಸುವ ಪ್ರಯತ್ನ ಇಲ್ಲಿನದ್ದು.

ಡಬ್ಲ್ಯುಟಿಒ ಉರುಳುವುದಕ್ಕೂ ಹಿಂದಿನ ಅಮೆರಿಕದ ವ್ಯವಹಾರ, ಯುದ್ಧ ನಡವಳಿಕೆ ಮತ್ತು ದುರಂತ ಘಟಿಸಿದ ನಂತರ ಕೇವಲ ತನ್ನ ಪ್ರತಿಷ್ಠೆ ಸಾಧನೆಗಾಗಿ ಲಾಡೆನ್‌ನನ್ನು ಪತ್ತೆ ಮಾಡಿ ಕೊಂದ ಘಟನೆಯ ವಿವರವನ್ನು ಕೃತಿ ಕಟ್ಟಿಕೊಟ್ಟಿದೆ.

ಒಂದೇ ಘಟನೆಯ ಆಚೆ ಈಚೆಗಿನ ಇತಿಹಾಸದ ಅಧ್ಯಯನ ಆಸಕ್ತರಿಗೆ, ಕುತೂಹಲಿಗಳಿಗೆ ಬೇಕಾದ ಕೃತಿಯಿದು. ಧರ್ಮದ ಹೆಸರಿನಲ್ಲಿ ಹಿಂಸೆ ವಿಜೃಂಭಿಸುವ ಸಂದರ್ಭದಲ್ಲಿ ಸಾಕಷ್ಟು ಆಧಾರ ಗ್ರಂಥಗಳ ಅಧ್ಯಯನದೊಂದಿಗೆ ಮೂಡಿಬಂದಿದೆ. ಕೃತಿಯಲ್ಲಿ ತೆರೆದುಕೊಳ್ಳುತ್ತಾ ಹೋಗುವ ವಿವರಗಳು ಪತ್ತೇದಾರಿ ಕಥೆಯನ್ನು ಓದುತ್ತಿರುವಂತೆ ಭ್ರಮೆ ಮೂಡಿಸುತ್ತವೆ. ಅಮೆರಿಕದ ಪಡೆಗಳು ಲಾಡೆನ್‌ನ ಪತ್ತೆ ಮಾಡುವ, ಆತನನ್ನು ಹತ್ಯೆಗೈಯುವ ಸಾಹಸದ ವಿವರಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ನಿವೃತ್ತ ಡಿಜಿಪಿಯವರೇ ಬರೆದಿರುವುದರಿಂದ ಈ ಕೃತಿಯಲ್ಲಿನ ಮಾಹಿತಿಯ ವಸ್ತುನಿಷ್ಠತೆ ಹೆಚ್ಚಿದೆ.

ADVERTISEMENT

ಕೃತಿ: ಆಪರೇಷನ್‌ ತ್ರಿಶೂಲ

ಲೇ: ಡಾ.ಡಿ.ವಿ.ಗುರುಪ್ರಸಾದ್‌

ಪ್ರ. ವಿಕ್ರಂ ಪ್ರಕಾಶನ ಬೆಂಗಳೂರು

ಸಂ: 9740994008

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.