ADVERTISEMENT

ಮೊದಲ ಓದು: ಪ್ರತಿಭೆ ಪಾಂಡಿತ್ಯಗಳ ಸಂಕಲನ

ಪ್ರಜಾವಾಣಿ ವಿಶೇಷ
Published 3 ಸೆಪ್ಟೆಂಬರ್ 2022, 19:30 IST
Last Updated 3 ಸೆಪ್ಟೆಂಬರ್ 2022, 19:30 IST
ಜಿ.ಎನ್‌. ದೇವಿ ಆಯ್ದ ಬರಹಗಳು
ಜಿ.ಎನ್‌. ದೇವಿ ಆಯ್ದ ಬರಹಗಳು   

ಜಿ.ಎನ್‌. ದೇವಿ ನಮ್ಮ ಕಾಲದ ಪ್ರಮುಖ ಚಿಂತಕರಲ್ಲಿ ಒಬ್ಬರು. ಸಾಹಿತ್ಯ, ಭಾಷಾಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಸಂಸ್ಕೃತಿ ವಿಮರ್ಶೆಯಂಥ ನಾಲ್ಕಾರು ಕ್ಷೇತ್ರಗಳ ಬಗ್ಗೆ ಮರಾಠಿ, ಗುಜರಾತಿ ಮತ್ತು ಇಂಗ್ಲಿಷಿನಲ್ಲಿ ತೊಂಬತ್ತು ಕೃತಿಗಳನ್ನು ಅವರು ರಚಿಸಿದ್ದಾರೆ. ಅವರ ಆಯ್ದ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂ.ಜಿ. ಹೆಗಡೆ.

ಪ್ರಕೃತ ಅನುವಾದ ಕೃತಿಯಲ್ಲಿ ಒರ್ಫಿಯಸ್‌ನ ಹಾಡು, ಅಪೂರ್ಣ ರಕ್ತಕಣ, ಕಳ್ಳನೆನಿಸಿಕೊಂಡ ಅಲೆಮಾರಿ, ಹಿಂಸೆಯ ಪೂರ್ವಾಪರ, ಭಾಷೆಯ ಇರವು: ಜ್ಞಾನ, ಸಮಾಜ ಮತ್ತು ವಾಚೋಹೀನತೆ, ವಾಚೋಹೀನತೆ, ಸ್ಮೃತಿಯ ಭವಿಷ್ಯ – ಎಂಬ ಲೇಖನಗಳು ಸಂಕಲನಗೊಂಡಿವೆ. ‘ಭಾಷೆಯ ಇರವು’ – ಈ ಲೇಖನವು ಭಾಷೆಯ ದ್ರವ್ಯ, ಬರವಣಿಗೆ ಮತ್ತು ವಾಚೋಹೀನತೆ, ಮೌನ ಬುದ್ಧಿ ವಿಕಲ್ಪ ಮತ್ತು ಭಾಷೆ, ಕಥನದ ಕತೆ, ಸತ್ಯ ಕಲ್ಪಕತೆ ಸೈಬರ್‌ ವಲಯ, ಮದ್ಯಸ್ಥ ವ್ಯವಸ್ಥೆ, ಮನೋಕ್ಷಮತೆ ವಿಚಾರಪ್ರಾಣಲಿ ಸೃಷ್ಟಿಶೀಲತೆ, ಜ್ಞಾನ ಮತ್ತು ಸ್ವಾತಂತ್ರ್ಯ – ಎಂಬ ಅಧ್ಯಾಯಗಳಲ್ಲಿ ಹರಡಿಕೊಂಡಿರುವುದು ವಿಷಯದ ವ್ಯಾಪ್ತಿಯನ್ನು ಸೂಚಿಸುವಂತಿದೆ. ಲೇಖನಗಳ ಸಂದರ್ಭಸೂಚಿಯನ್ನು ಒದಗಿಸಿರುವುದು ಪ್ರಯೋಜನಕಾರಿಯಾಗಿದೆ.

‘ಪಶ್ಚಿಮ ಹಾಗೂ ಪೂರ್ವಗಳ ವಿದ್ವತ್ತು, ಜಗತ್ತಿನ ಮಹಾನ್‌ ಕೃತಿಗಳ ಆಳವಾದ ಓದು, ಚರಿತ್ರೆಯ ದಾರ್ಶನಿಕವಾದ ತಿಳುವಳಿಕೆ ಹಾಗೂ ಸಾಮಾಜಿಕ ಬದ್ಧತೆಗಳು ಮುಪ್ಪರಿಗೊಂಡು ಸೃಷ್ಟಿಸಿದ ಜ್ಞಾನವು ಈ ಬರಹಗಳಲ್ಲಿದೆ‘ ಎಂಬ ರಾಜೇಂದ್ರ ಚೆನ್ನಿಯವರ ಹಿನ್ನುಡಿಯ ಮಾತುಗಳು ಪ್ರಕೃತ ಕೃತಿಯ ವಿಶೇಷವನ್ನು ಹೇಳಿವೆ.

ADVERTISEMENT

ಕೃತಿ: ಜಿ. ಎನ್‌. ದೇವಿ ಆಯ್ದ ಬರಹಗಳು

ಅನುವಾದಕರು: ಎಂ. ಜಿ. ಹೆಗಡೆ

ಪ್ರಕಾಶಕರು: ಕ್ರಿಯಾ ಮಾಧ್ಯಮ

ಪುಟಗಳು: 224

ಬೆಲೆ: ₹ 220/–

ದೂರವಾಣಿ: 9036082005

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.