ADVERTISEMENT

ಹೊಳವನು ಚಂದಿರ ಹಗಲಲ್ಲಿ ಮತ್ತು ಚಿಟ್ಟೆಗಳ ಪಾಡು: ಚುಚ್ಚುವ ವಾಸ್ತವದ ಕಾದಂಬರಿಗಳು

ಪ್ರಜಾವಾಣಿ ವಿಶೇಷ
Published 9 ಜುಲೈ 2022, 20:15 IST
Last Updated 9 ಜುಲೈ 2022, 20:15 IST
ಹೊಳೆವನು ಚಂದಿರ ಹಗಲಲ್ಲಿ ಮತ್ತು ಚಿಟ್ಟೆಗಳ ಪಾಡು
ಹೊಳೆವನು ಚಂದಿರ ಹಗಲಲ್ಲಿ ಮತ್ತು ಚಿಟ್ಟೆಗಳ ಪಾಡು   

ಕಾದಂಬರಿಕಾರ್ತಿ, ನೆಹರೂ ಮನೆತನದ ನಯನತಾರ ಸೆಹಗಲ್‌ ಅವರ ‘When the Moon shines by Day’ ಹಾಗೂ ‘The fate of Butterflies’ ಕೃತಿಗಳ ಅನುವಾದವೇ ಈ ಕೃತಿ.

ನೆಹರೂ ಅವರ ತಂಗಿ ವಿಜಯಲಕ್ಷ್ಮೀ ಪಂಡಿತ್‌ ಅವರ ಪುತ್ರಿ ನಯನತಾರ. ಭಾರತೀಯ ಇಂಗ್ಲಿಷ್‌ ಸಾಹಿತ್ಯದ ಪ್ರಥಮ ಕಾದಂಬರಿಕಾರ್ತಿ ನಯನತಾರ ಅವರ ಕಾದಂಬರಿಗಳಲ್ಲಿ ಸ್ತ್ರೀ ಪ್ರಜ್ಞೆ, ರಾಜಕೀಯ ಪ್ರಜ್ಞೆ ಸೇರಿದಂತೆ ಹತ್ತುಹಲವು ವಿಷಯಗಳಿವೆ.ಕೃತಿಯ ಮೊದಲ ಕಾದಂಬರಿ ‘ಹೊಳೆವನು ಚಂದಿರ ಹಗಲಲ್ಲಿ’ಯಲ್ಲಿ ತಮ್ಮಅಮ್ಮ ವಿಜಯಲಕ್ಷ್ಮಿ ಪಂಡಿತ್‌ ಅವರ ಜೈಲು ದಿನಚರಿಯನ್ನು ನಯನತಾರ ವಿವರವಾಗಿ ಉಲ್ಲೇಖಿಸುತ್ತಾರೆ. ‘ನಯನತಾರರನ್ನು ಹತ್ತಿರದಿಂದ ಬಲ್ಲವರು ಅವರ ಕಾದಂಬರಿಗಳ ಹಲವಾರು ಪಾತ್ರಗಳು ಇದು ಆತ್ಮಕಥಾನಕವೋ ಅಂತನ್ನಿಸುವಷ್ಟು ಸಾಮ್ಯವನ್ನು ಹೊಂದಿವೆ ಅಂತಲೂ ಅಚ್ಚರಿಪಡುತ್ತಾರೆ’ ಎಂದು ಅನುವಾದಕಿಸುಕನ್ಯಾ ಅವರು ಉಲ್ಲೇಖಿಸುವುದು ಇದಕ್ಕೆ ಪೂರಕ. ರೆಹಾನಾ ತಿರುವು ಹಾಕುವ ಪ್ರತಿ ಪುಟದಲ್ಲೂ ನಯನತಾರ ಕಾಣಿಸುತ್ತಾರೆ.

ಭಾರತ ಪ್ರಧಾನ ಪಾತ್ರವಾಗಿ ಕಾಣಿಸಿಕೊಳ್ಳುವ ಇವರ ಸಾಹಿತ್ಯದಲ್ಲಿ ನೆಹರೂ ಅವರ ಪ್ರಭಾವವೂ ಅಕ್ಷರ ರೂಪದಲ್ಲೇ ಕಾಣಸಿಗುತ್ತದೆ. ‘ಹೊಳೆವನು ಚಂದಿರ ಹಗಲಲ್ಲಿ’ ಎನ್ನುವ ಕಾದಂಬರಿಯಲ್ಲೂ ಕಪ್ಪು ಶೇರ್ವಾನಿಯ ಜೊತೆಗೆ ಕಪ್ಪು ಗಾಂಧಿ ಟೊಪ್ಪಿ ಧರಿಸಿದ ನೆಹರೂ ಅವರ ನೆರಳುಗೆರೆ ಕಾಣಸಿಗುತ್ತದೆ. 144 ಪುಟಗಳ ‘ಚಿಟ್ಟೆಗಳ ಪಾಡು’ ಪ್ರಸ್ತುತ ಕಾಡುತ್ತಿರುವ ಅಸಹಿಷ್ಣುತೆಯ ಒಳನೋಟವನ್ನು ತೆರೆದಿಡುತ್ತದೆ. ಅನುವಾದದ ಆಕರ್ಷಣೆಯನ್ನು ಶೀರ್ಷಿಕೆಯಿಂದಲೇ ತೋರ್ಪಡಿಸಿರುವ ಸುಕನ್ಯಾ ಅವರ ಭಾಷಾಂತರದಲ್ಲಿನ ಆಸಕ್ತಿ ಗಮನಾರ್ಹವಾದುದು. ಸಮರ್ಥವಾದ ಅನುವಾದ ಓದಿಗೆ ಪೂರಕವಾಗಿದೆ.

ADVERTISEMENT

ಕೃತಿ: ಹೊಳವನು ಚಂದಿರ ಹಗಲಲ್ಲಿ ಮತ್ತು ಚಿಟ್ಟೆಗಳ ಪಾಡು

ಲೇ: ನಯನತಾರ ಸೆಹಗಲ್‌

ಕನ್ನಡಕ್ಕೆ: ಸುಕನ್ಯಾ ಕನಾರಳ್ಳಿ

ಪ್ರ: ಅಹರ್ನಿಶಿ ಪ್ರಕಾಶನ

ಸಂ: 9449174662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.