ADVERTISEMENT

ಮೊದಲ ಓದು: ವಿಜ್ಞಾನದ ಜಾಡು ಬದಲಿಸಿದ ಜಾಣೆಯರು– ಕುತೂಹಲ ಹೆಚ್ಚಿಸುವ ಕೃತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 21:55 IST
Last Updated 5 ಜುಲೈ 2025, 21:55 IST
<div class="paragraphs"><p>ವಿಜ್ಞಾನದ ಜಾಡು ಬದಲಿಸಿದ ಜಾಣೆಯರು ಲೇ: ಸರೋಜಾ ಪ್ರಕಾಶ್ಪ್ರ: ಭೂಮಿ ಬುಕ್ಸ್‌ಸಂ: 944917 7628</p></div>

ವಿಜ್ಞಾನದ ಜಾಡು ಬದಲಿಸಿದ ಜಾಣೆಯರು ಲೇ: ಸರೋಜಾ ಪ್ರಕಾಶ್ಪ್ರ: ಭೂಮಿ ಬುಕ್ಸ್‌ಸಂ: 944917 7628

   

ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಸಂಶೋಧನೆಗಳ ಚರ್ಚೆಗಳಾದರೆ ಅಲ್ಲಿ ಮೇಡಂ ಕ್ಯೂರಿ ಹೊರತುಪಡಿಸಿದರೆ ಉಳಿದೆಲ್ಲಾ ಹೆಸರುಗಳು ಪುರುಷ ವಿಜ್ಞಾನಿಗಳದ್ದೇ ಆಗಿರುತ್ತದೆ. ಭಾರತವನ್ನೂ ಒಳಗೊಂಡು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ತೊಡಗಿದ್ದರೂ, ಬೆಳಕಿಗೆ ಬರುವುದು ಬೆರಳೆಣಿಕೆಯಷ್ಟು. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಪ್ರಮುಖ ಮಹಿಳೆಯರ ಕುರಿತ ಕೃತಿಯನ್ನು ಸರೋಜಾ ಪ್ರಕಾಶ್ ರಚಿಸಿದ್ದಾರೆ.

‘ವಿಜ್ಞಾನದ ಜಾಡು ಬದಲಿಸಿದ ಜಾಣೆಯರು’ ಎಂಬ ಈ ಕೃತಿಯ ರಚನೆಗೆ ಕಾರಣವಾದ ಸಂಗತಿಯಿಂದ ಹಿಡಿದು, ಇಲ್ಲಿ ದಾಖಲಾಗಿರುವ 13 ಪ್ರಮುಖ ಮಹಿಳಾ ವಿಜ್ಞಾನಿಗಳ ಸಾಧನೆಯವರೆಗೂ ಎಲ್ಲವೂ ಕುತೂಹಲ ಇಮ್ಮಡಿಗೊಳಿಸುವಂತವುಗಳೇ ಆಗಿವೆ. ಮೂಲ ವಿಜ್ಞಾನಕ್ಕೆ ಸಂಬಂಧಿಸಿದ ಸಿದ್ಧಾಂತಗಳಿಗೆ ತಳಪಾಯ ಹಾಕಿದ ಕೆಲವು ಪ್ರಮುಖ ಮಹಿಳಾ ವಿಜ್ಞಾನಿಗಳ ನೈಜಕಥೆಗಳನ್ನು ಹಿಡಿದಿಡುವ ಪ್ರಯತ್ನವನ್ನೂ ಲೇಖಕಿ ಮಾಡಿದ್ದಾರೆ.
ಮಹಿಳಾ ವಿಜ್ಞಾನಿಗಳ ಸಂಶೋಧನೆ ಮಾತ್ರವಲ್ಲದೆ, 17, 18 ಹಾಗೂ 19ನೇ ಶತಮಾನದಲ್ಲಿ ಯುರೋಪ್‌, ಅಮೆರಿಕದಂತ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಲಿಂಗತಾರತಮ್ಯ ಹೇಗಿತ್ತು ಎಂಬುದರ ಸ್ಥಿತಿಗತಿಯ ವಿವರಣೆಯೂ ಇದರಲ್ಲಿ ಸಿಗಲಿದೆ. ಮಹಿಳೆಯರು ದೂರದರ್ಶಕ ಮುಟ್ಟುವಂತಿರಲಿಲ್ಲ, ಉನ್ನತ ಶಿಕ್ಷಣ ಪಡೆಯುವುದೂ ದೂರದ ಮಾತಾಗಿತ್ತು, ಒಂದೊಮ್ಮೆ ಹೊಸ ಆವಿಷ್ಕಾರ ಮಾಡಿದರೆ ಪೇಟೆಂಟ್‌ ಪಡೆಯಲು ಮಹಿಳಾ ವಿಜ್ಞಾನಿಗಳು ಪಟ್ಟ ಕಷ್ಟದ ಹಾದಿಯ ಪಯಣ ಹೇಗಿತ್ತು ಎಂಬ ಸಂಗತಿ ಇಲ್ಲಿ ದಾಖಲಾಗಿರುವ ಸಾಧಕ ಮಹಿಳೆಯರ ಕಥೆಗಳಲ್ಲೇ ಸಿಗುತ್ತವೆ.

ADVERTISEMENT

ಬಗೆಬಗೆಯ ಕಬ್ಬು ಹಾಗೂ ಇಂಗ್ಲೆಂಡ್‌ನ ಅಗಲಗಲದ ಮ್ಯಾಗ್ನೊಲಿಯಾ ಹೂವು ಪರಿಚಯಿಸಿದ ಭಾರತದ ಜಾನಕಿ ಅಮ್ಮಾಳ್, ಕಳೆಯನ್ನೇ ಬಳಸಿ ಮಲೇರಿಯಾ ರೋಗಕ್ಕೆ ಮದ್ದು ಕಂಡುಹಿಡಿದ ಚೀನಾದ ತು ಯು ಯು, ಮೂರು ದಶಕಗಳ ಕಾಲ ಚಿಂಪಾಂಜಿಯೊಂದಿಗೇ ಜೀವಿಸಿ ಅವುಗಳ ಬಗ್ಗೆ ಸಂಶೋಧನಾ ಬರಹಗಳನ್ನು ದಾಖಲಿಸಿದ ಜೇನ್‌ ಗುಡಾಲ್‌ ಇವರೆ ಸರೋಜಾ ಪ್ರಕಾಶ್ ಅವರ ಕೃತಿಯ ನಾಯಕಿಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.