ADVERTISEMENT

ಇಲ್ಲಿಂದ ಮುಂದೆಲ್ಲ ಕಥೆ: ಓದುಗರ ಒಳಗನ್ನು ಕಲಕುವ ಕೃತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 0:18 IST
Last Updated 13 ಏಪ್ರಿಲ್ 2025, 0:18 IST
<div class="paragraphs"><p>ಇಲ್ಲಿಂದ ಮುಂದೆಲ್ಲ ಕಥೆ</p></div>

ಇಲ್ಲಿಂದ ಮುಂದೆಲ್ಲ ಕಥೆ

   

ನಮ್ಮ ನಿಮ್ಮ ಮನೆಗಳಲ್ಲಿ ನಡೆಯುವ ಸಂಗತಿಗಳೇ. ಆದರೆ ಆ ಸಂಗತಿಯನ್ನು ಓದುವಾಗ ಹೌದೌದು... ಇದು ನಮ್ಮ ಸುತ್ತಲಿನ ಕತೆಯೇ. ಆದರೆ ಕತೆ ಮುಗಿದ ಮೇಲೆ ಏನಾಯ್ತು ಎಂಬ ಪ್ರಶ್ನೆಯ ಗುಂಗಿಹುಳ ಬಿಡುವುದು ಈ ಸಂಕಲನದ ಪ್ರತಿ ಕತೆಯ ವಿಶೇಷ. ಒಂದೇ ಗುಕ್ಕಿನಲ್ಲಿ ಪುಸ್ತಕ ಓದಿ ಮುಗಿಸುವಂಥದ್ದಲ್ಲ. ಪ್ರತಿ ಕತೆಯೂ ಗುಂಗು ಹಿಡಿಸಿ, ನಡುವೆ ಒಂದಷ್ಟು ಸಮಯ ಬೇಡುತ್ತದೆ. ಕತೆಯಾಗಿ ಕಾಡುವುದಷ್ಟೇ ಅಲ್ಲ, ಅದರ ಮುಂದಿನ ಕತೆಯೇನು ಎಂಬಂತೆ ತರ್ಕಕ್ಕೆ ಒಡ್ಡುತ್ತದೆ. 

ಕತೆಗಳು ಮಾಡಬೇಕಾದ ಕೆಲಸವೇ ಅದು. ಒಂದು ಕಥನ, ನಿಮ್ಮೊಟ್ಟಿಗೆ ಸಾಗಿ, ಗುಕ್ಕನೆ ನಿಂತು, ಇಲ್ಲಿಂದ ಮುಂದಿನ ದಾರಿ ನಿನ್ನದು ಎಂದು ಬಿಟ್ಟುಬಿಡುವಂಥ ಅಂತ್ಯಗಳು ಇಲ್ಲಿಯ ಕತೆಗಳಿಗಿವೆ. ಪುಸ್ತಕದ ಪ್ರತಿ ಕತೆಯೂ ಒಂದು ನಿಡಿದಾದ ಉಸಿರನ್ನು ಆಚೆ ಹಾಕುವಂತೆ ಮಾಡುತ್ತದೆ. ಅಲ್ಲಿಂದಲೇ ಕತೆ ನಿಮ್ಮೊಂದಿಗೆ ಸಂವಾದಿಯಾಗುತ್ತ ನಡೆಯುತ್ತದೆ. ಮೊಬೈಲ್‌ ಫೋನಿನ ಸ್ಕ್ರೀನಿನಲ್ಲಿ ಸಮಾಧಾನ ಹುಡುಕುವ ನಮಗೆ ಮನುಷ್ಯ ಸಹಜ ಸ್ವಭಾವ ಮತ್ತು ಬಾಂಧವ್ಯಗಳ ಸ್ವರೂಪ ಬದಲಾಗುತ್ತಿರುವ ಆತಂಕದೊಡನೆ ಮುಖಾಮುಖಿಯಾಗಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಬೆಂಬಲವನ್ನೇ ಬಲವೆಂದುಕೊಳ್ಳುತ್ತ ಮನುಜ ಸಹಜ ಅಂತಃಕರಣೆಯಿಂದ, ಸಹಾನುಭೂತಿಯಿಂದ ದೂರವಾಗುವ ಕತೆಗಳು ನಮ್ಮ ಒಳಗನ್ನು ಕಲಕುತ್ತವೆ. ಮನುಷ್ಯ ಸಹಜ ಈರ್ಷೆ, ಪ್ರೀತಿ, ಪ್ರೇಮ, ವಾತ್ಸಲ್ಯ, ಮಮತೆ ಮತ್ತು ಮನುಷ್ಯತ್ವಗಳ ದಟ್ಟವಾದ ಕತೆಗಳು ಓದುಗರನ್ನು ಹಿಡಿದಿಡುತ್ತವೆ.

ADVERTISEMENT

ಇಲ್ಲಿಂದ ಮುಂದೆಲ್ಲ ಕಥೆ

ಲೇ: ರಘುನಾಥ ಚಹ

ಪ್ರ: ಅಂಕಿತ ಪ್ರಕಾಶನ

ಸಂ: 90191 90502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.