ADVERTISEMENT

ಸಾವಯವ ಕೃಷಿಯ ವೈಜ್ಞಾನಿಕ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 0:30 IST
Last Updated 17 ಡಿಸೆಂಬರ್ 2023, 0:30 IST
ಪುಸ್ತಕದ ಮುಖಪುಟ
ಪುಸ್ತಕದ ಮುಖಪುಟ   

ಸಾವಯವ ಕೃಷಿ ಕುರಿತ ವೈಜ್ಞಾನಿಕ ಹಾಗೂ ಅನುಭವದ ಮಾಹಿತಿಗಳ ಸಮ್ಮಿಲನವಾಗಿರುವ ಕೃತಿ ಪ್ರೊ. ಎಸ್. ಎಸ್. ಕಟಗಿಹಳ್ಳಿ ಮಠ ಅವರ ‘ಸಾವಯವ ಕೃಷಿ ಒಂದು ಅಧ್ಯಯನ’ ಕೃತಿ. ಕೃಷಿ ವಿಜ್ಞಾನಿ, ಕೀಟಶಾಸ್ತ್ರಜ್ಞರು, ಸಸ್ಯ ವಿಜ್ಞಾನಿಯೂ ಆಗಿದ್ದ ಲೇಖಕರು, ರೈತರಾಗಿ ಹಾಗೂ ವಿಜ್ಞಾನಿಯಾಗಿಯೂ ಸಾವಯವ ಕೃಷಿಯನ್ನು ಗಮನಿಸಿ, ಮಾಹಿತಿಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಕೃಷಿ ಕುಟುಂಬದಿಂದ ಬಂದ ಶತಾಯುಷಿ ಪ್ರೊ.ಎಸ್‌.ಎಸ್‌. ಕಟಗಿಹಳ್ಳಿಮಠರು, ತಮ್ಮ ಕುಟುಂಬದವರು ಅನುಸರಿಸುತ್ತಿದ್ದ ಸಾಯವ ಕೃಷಿ ಪದ್ಧತಿಯ ಮಾಹಿತಿಯನ್ನು ವಿವರಿಸುತ್ತಾ, ಆ ಪದ್ಧತಿಯ ಮೇಲೆ ವಿಜ್ಞಾನದ ಬೆಳಕು ಚೆಲ್ಲಿದ್ದಾರೆ. ಕೃತಿಯಲ್ಲಿ ಸಾವಯವ ಕೃಷಿಯ ಪೀಠಿಕೆಯಿಂದ ಆರಂಭವಾಗಿ, ಮಣ್ಣಿನ ಉತ್ಪತ್ತಿ, ಫಲವತ್ತತೆ, ಸಸ್ಯ ಪೋಷಕಾಂಶಗಳು, ಸಾವಯವ ಗೊಬ್ಬರಗಳು, ಜಲ ಸರಂಕ್ಷಣೆ ಮತ್ತು ಸಾವಯವ ಕೃಷಿಯ ನಡುವಿನ ಸಂಬಂಧ, ಬೆಳಕು–ಗಾಳಿ ಹಾಗೂ ಕೃಷಿ ಸಂಬಂಧಗಳು, ಬೆಳೆಗಳ ಯೋಜನಾ ಪದ್ಧತಿ, ಅರಣ್ಯ ಕೃಷಿ ಮತ್ತು ಪರಿಸರ ಸಂರಕ್ಷಣೆ, ಬೆಳೆ ಸಂರಕ್ಷಣೆ ವಿಧಾನಗಳು.. ಹೀಗೆ ಹನ್ನೊಂದು ಅಧ್ಯಾಯಗಳಲ್ಲಿ ಮಾಹಿತಿಯನ್ನು ವಿಂಗಡಿಸಿದ್ದಾರೆ.

ಮಾಹಿತಿಗೆ ಪೂರಕವಾಗಿ ಕೋಷ್ಠಗಳಿವೆ. ಕೃಷಿ ವಲಯಗಳ ವಿವರಣೆ, ಕೆರೆ–ಕಟ್ಟೆಗಳ ಇತಿಹಾಸದ ಮಾಹಿತಿ, ಮೇವಿನ ಬೆಳೆ, ಔಷಧೀಯ ಸಸ್ಯಗಳು.. ಹೀಗೆ ಸಾವಯವ ಕೃಷಿಗೆ ಪೂರಕವಾಗಿ ಅಗತ್ಯವಿರುವ ಹಲವು ಮಾಹಿತಿಗಳು ಈ ಕೃತಿಯಲ್ಲಿವೆ.

ADVERTISEMENT

ಗ್ರಾಮೀಣ ಭಾಗದ ಕೃಷಿ ವಿಸ್ತರಣಾ ಕಾರ್ಯಕರ್ತರಿಗೆ ಆಕರ ಗ್ರಂಥವಾಗಿ, ರೈರ‌ಸಮುದಾಯಕ್ಕೆ ಮಾರ್ಗದರ್ಶಕ ಕೈಪಿಡಿಯಾಗುವ ಕೃತಿ ಇದು.

ಪುಸ್ತಕ: ಸಾವಯವ ಕೃಷಿ ಒಂದು ಅಧ್ಯಯನ

ಲೇಖಕರು: ಪ್ರೊ.ಎಸ್. ಎಸ್. ಕಟಗಿಹಳ್ಳಿಮಠ

ಪ್ರಕಾಶನ: ಭಾರತೀಯ ವಿದ್ಯಾಭವನ ಬೆಂಗಳೂರು

ಸಂ: 080–22267303

ಪುಟಗಳು: 384

ಬೆಲೆ: ₹300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.