ADVERTISEMENT

ಮೊದಲ ಓದು: ಹಲವು ಸಂಗತಿಗಳ ಸಮಪಾಕದ ಕಥೆಗಳು

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2025, 23:15 IST
Last Updated 11 ಅಕ್ಟೋಬರ್ 2025, 23:15 IST
4 ಗಾಂಧೀ ಜೋಡಿನ ಮಳಿಗೆ
4 ಗಾಂಧೀ ಜೋಡಿನ ಮಳಿಗೆ   

‘ಮನುಷ್ಯ ಏಕಾಂತವಾದಗೆಲ್ಲ ಒಂದೋ ಅಸಾಧಾರಣವಾಗಿ ಉದ್ಧಾರವಾಗುತ್ತಾನೆ ಇಲ್ಲ ಸಂಪೂರ್ಣವಾಗಿ ಹಾಳಾಗುತ್ತಾನಂತೆ’ ಇಂಥದ್ದೆ ಚುರುಕು ಸಾಲುಗಳ ಮೂಲಕ ಹಲವು ಹೊಳಹುಗಳನ್ನು ಬಹಳ ಅನಾಯಾಸವಾಗಿ ದಕ್ಕಿಸಿಕೊಡುತ್ತದೆ ‘ಗಾಂಧೀ ಜೋಡಿನ ಮಳಿಗೆ’ ಕಥಾ ಸಂಕಲನ.

ಇಲ್ಲಿರುವ ಕಥೆಗಳು ವರ್ತಮಾನ ಹಾಗೂ ಭೂತಕಾಲದ ಹಲವು ಸಂಗತಿಗಳ ಸಮಪಾಕದಂತೆ ಕಾಣುತ್ತವೆ. ಇಲ್ಲಿರುವ ಕೆಲ ಕಥೆಗಳು ತನ್ನೊಳಗನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡದೆ ಅಂತರ್ಮುಖಿಯಾಗಿದ್ದುಕೊಂಡೇ ಓದುಗರನ್ನು ಸೆಳೆಯುತ್ತವೆ.

ಹಾಗೆಯೇ ಕಾಗದದ ದೋಣಿಗಳು ಎನ್ನುವ ಕಥೆಯಲ್ಲಿ ನಿರ್ದಯಿ ಬದುಕು ತಂದೊಡ್ಡುವ ಸಂಕಟವನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಲಾಗಿದೆ. ಹಳ್ಳಿ ಹಾಗೂ ಪಟ್ಟಣ ಬದುಕಿನ ನಡುವಿನ ದ್ವಂದ್ವಗಳ ನಡುವೆ, ತಾಯಿಯಿಂದ ದೂರ ಉಳಿದು ಸುಖದ ಲೋಲುಪತೆಯಲ್ಲಿಯೇ ಕಳೆದು ಹೋದ ಯುವಕನೊಬ್ಬನ ಕಥೆಯಾದರೂ ಅದರ ಕೊನೆಯ ತಿರುವು ಓದುಗರನ್ನು ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡುತ್ತದೆ.

ADVERTISEMENT

ಈಸೂರು ದಂಗೆಯಂಥ ಹೋರಾಟದಿಂದ ಹುಟ್ಟಿರುವ ಕಥೆಯೊಂದು ಬಹಳ ಸೊಗಸಾಗಿದೆ. ಕಥೆಯನ್ನು ವಿಭಿನ್ನವಾಗಿ ನಿರ್ವಹಿಸಿರುವುದು ಅಚ್ಚರಿ ತರುತ್ತದೆ. ಅಲ್ಲದೇ ಕಥೆಗಾರ ಪ್ರಕಾಶ್ ಪುಟ್ಟಪ್ಪ ಅವರು ಈ ಕಥೆಯ ಮೂಲಕ ಓದುಗರಲ್ಲಿ ಭರವಸೆಯನ್ನು ಹುಟ್ಟಿಸುತ್ತಾರೆ. ಈ ಕಥಾ ಸಂಕಲದನಲ್ಲಿರುವ ಹದಿನಾಲ್ಕು ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.

ಗಾಂಧೀ ಜೋಡಿನ ಮಳಿಗೆ

ಲೇ: ಪ್ರಕಾಶ್‌ ಪುಟ್ಟಪ್ಪ

ಪ್ರ: ಅಮೂಲ್ಯ ಪುಸ್ತಕ

ಸಂ: 94486 76770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.