ADVERTISEMENT

ಮಾನಸಾ ಮುಕುಂದ್‌ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST
ಮಾನಸಾ ಮುಕುಂದ್‌ರಂಗಪ್ರವೇಶ
ಮಾನಸಾ ಮುಕುಂದ್‌ರಂಗಪ್ರವೇಶ   

ಸುಕೃತಿ ನಾಟ್ಯಾಲಯದ ಭರತನಾಟ್ಯ ಕಲಾವಿದೆ ಮತ್ತು ನಿರ್ದೇಶಕಿ ಹೇಮಾ ಪಂಚಮುಖಿ ಅವರ ಶಿಷ್ಯೆ ಮಾನಸಾ ಮುಕುಂದ್ ರಂಗಪ್ರವೇಶ ಮಾಡಲಿದ್ದಾರೆ.

ಅವರ ರಂಗಾಭಿವಂದನೆ ಕಾರ್ಯಕ್ರಮವು ಶುಕ್ರವಾರ (ಜನವರಿ 27) ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ಆಸಕ್ತಿ ಇದ್ದ ಮಾನಸಳ ಪ್ರತಿಭೆ ಅರಳಲು ತಾಯಿ ಕುಸುಮಾ ಅವರ ಬೆಂಬಲದೊಂದಿಗೆ ಸುಕೃತ ನಾಟ್ಯಾಲಯದ ಪಾತ್ರ ಮುಖ್ಯವಾಗಿದೆ. ಭರತನಾಟ್ಯದ ಬಗ್ಗೆ ಗೀಳು ಹಚ್ಚಿಕೊಂಡ ಮಾನಸ ನಾಟ್ಯ ಕಲಾವಿದೆಯಾಗಿ ಹಲವು ಕಡೆ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ADVERTISEMENT

 `ಪ್ರಭಾತ ಕಲಾವಿದರು~ ಸಂಸ್ಥೆಯ ಹೇಮಾ ಪಂಚಮುಖಿಯವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡಿದರು. 2007 ರಲ್ಲಿ ವಿಕಾಸ ಭಾರತೋತ್ಸವ ಮತ್ತು ಪ್ರತಿಭೋತ್ಸವದಲ್ಲಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರ ಮಡಿಲಿಗೆ ಸೇರಿವೆ.

2009ರಲ್ಲಿ ನೃತ್ಯ ಕಾರಂಜಿಯಲ್ಲಿ ಅತ್ಯಂತ ಗೌರವಾನ್ವಿತ ಸ್ಪಂದನ ಪ್ರಶಸ್ತಿ ಮತ್ತು ಅನನ್ಯ ಪ್ರತಿಭೆ ಪ್ರಶಸ್ತಿಯೂ ಸಂದಿದೆ. ಈ ಬಾರಿ ವರನಟ ಡಾ.ರಾಜ್ ಕುಮಾರ್ ನಕ್ಷತ್ರ ಮಂಡಳಿ ಸಾಂಸ್ಕೃತಿಕ ಸಂಸ್ಥೆಯೂ ಅತ್ಯುನ್ನತ ನೃತ್ಯ ಕಲಾವಿದೆ ಎಂದು ಮಾನಸಾ ಮುಕುಂದ್ ಅವರನ್ನು ಗುರುತಿಸಿದೆ.

ಈ ರಂಗಾಭಿವಂದನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದುಷಿ ಡಾ. ಶ್ಯಾಮಲಾ.ಜಿ.ಭಾವೆ, ದೂರದರ್ಶನ ಕೇಂದ್ರ ನಿರ್ದೇಶಕ ಡಾ. ಮಹೇಶ್ ಜೋಷಿ, ಫ್ರಭಾತ ಕಲಾವಿದರು, ಕಾರ್ಯದರ್ಶಿ ಟಿ.ಜಿ.ವೆಂಕಟೇಶಾಚಾರ್ ಮುಂತಾದವರು ಭಾಗವಹಿಸಲಿದ್ದಾರೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.