ADVERTISEMENT

ಸ್ವಾತಿ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 19:59 IST
Last Updated 7 ಜೂನ್ 2013, 19:59 IST
ಸ್ವಾತಿ ರಂಗಪ್ರವೇಶ
ಸ್ವಾತಿ ರಂಗಪ್ರವೇಶ   

ಸ್ವಾತಿ ಕೆ.ಅಯ್ಯಂಗಾರ್ ಅವರ ಭರತನಾಟ್ಯ ರಂಗಪ್ರವೇಶ ಶನಿವಾರ ಸಂಜೆ 6ಕ್ಕೆ ಎಡಿಎ ರಂಗಮಂದಿರದಲ್ಲಿ ನಡೆಯಲಿದೆ.

ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ಸ್‌ನ ಮಂಜುಳಾ ಪರಮೇಶ್ ಈಕೆಯ ಗುರು. ಕಲೆಯ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡಿರುವ ಸ್ವಾತಿ ಈಗ ಕಾರ್ಡಿಯಲ್ ಹೈಸ್ಕೂಲ್‌ನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ವಾತಿಯ ನೃತ್ಯಯಾನ ಪ್ರಾರಂಭಗೊಂಡಿದ್ದು ದೇವರಾಜ್ ಗೋಪಾಲ್ ಅವರ ಸಾರಥ್ಯದಿಂದ. ಇವರು ಸ್ವಾತಿಗೆ ನೃತ್ಯದ ಪಟ್ಟುಗಳು ಜತೆಗೆ ಹಾಡುಗಾರಿಕೆಯನ್ನು ಕಲಿಸಿಕೊಟ್ಟರು. ಸದ್ಯಕ್ಕೆ ಅವರು ಕರ್ನಾಟಕ ಕಲಾಶ್ರೀ ಮಂಜುಳಾ ಪರಮೇಶ್ ಅವರ ಬಳಿ ಭರತನಾಟ್ಯ ಮತ್ತು ಗಾಯನ ಅಭ್ಯಾಸ ಮಾಡುತ್ತಿದ್ದಾರೆ.

ತಮಿಳುನಾಡಿನ ಸೇಲಂನಲ್ಲಿ ನಡೆದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಬೆಂಗಳೂರು ಹೈಕೋರ್ಟ್ ಆಯೋಜಿಸಿದ್ದ ವಸಂತೋತ್ಸವ, ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ನಡೆಸುವ ವಾರ್ಷಿಕ ಉತ್ಸವ `ಸಂಕ್ರಮಣ'ದಲ್ಲಿ ಕಾರ್ಯಕ್ರಮ ನೀಡಿ ಎಲ್ಲರ ಮೆಚ್ಚುಗೆ ಪಡೆದಿದ್ದು ಸ್ವಾತಿಯ ಅಗ್ಗಳಿಕೆ.

ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಜೆ.ಸಿ.ರಸ್ತೆ. ಸಂಜೆ 6.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.