ADVERTISEMENT

ಸೂಫಿ ಸಂಗೀತದ ಸುಧೆ, ಕವ್ವಾಲಿಯ ಹೊಳೆ

nijami brothers sufi music

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:00 IST
Last Updated 21 ಮಾರ್ಚ್ 2019, 20:00 IST
ನಿಜಾಮಿ ಸಹೋದರರು
ನಿಜಾಮಿ ಸಹೋದರರು   

ಇಂಡಿಯಾ ಫೌಂಡೇಷನ್‌ ಆಫ್‌ ಆರ್ಟ್ಸ್ (ಐಎಫ್‌ಎ) ಶುಕ್ರವಾರ ನಗರದ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಸೂಫಿ ಸಂಗೀತ ರಸಸಂಜೆ ಏರ್ಪಡಿಸಿದೆ.

ಉಸ್ತಾದ್‌ ಚಾಂದ್ ನಿಜಾಮಿ, ಶಹದಾಬ್‌ ಫರಿದಿ ಮತ್ತು ಶೊಹ್ರಾಬ್‌ ಫರಿದಿ ನಿಜಾಮಿ ಅವರು ಒಂದೂವರೆ ಗಂಟೆ ಬೆಂಗಳೂರಿನ ಸಂಗೀತಪ್ರಿಯರಿಗೆಸೂಫಿ ಸಂಗೀತದ ರಸದೌತಣ ಬಡಿಸಲಿದ್ದಾರೆ.

ನಿಜಾಮಿ ಬಂಧು ಮನೆತನಕ್ಕೆ ಸೂಫಿ ಸಂಗೀತದೊಂದಿಗೆಏಳು ನೂರು ವರ್ಷಗಳ ನಂಟಿದೆ. ಇಡೀ ಕುಟುಂಬತಲೆಮಾರುಗಳಿಂದ ಸೂಫಿ ಸಂಗೀತ ಮತ್ತು ಕವ್ವಾಲಿಗೆ ತನ್ನನ್ನು ಅರ್ಪಿಸಿಕೊಂಡಿದೆ.

ADVERTISEMENT

ಸೂಫಿ ಬ್ಯಾಂಡ್‌ ಪ್ರತಿಷ್ಠಿತಸಿಕಂದರ್‌ ಘರಾಣಾದ ಗರಡಿಯಲ್ಲಿ ಪಳಗಿದೆ. ಕವ್ವಾಲಿ ಸಂಗೀತದ ಅನೇಕ ದಿಗ್ಗಜರು ಸಿಕಂದರ್‌ ಘರಾಣದಿಂದಲೇ ಬಂದಿದ್ದಾರೆ. ಪ್ರೀತಿಯ ಪರಾಕಾಷ್ಠೆಯಲ್ಲಿ ದೈವತ್ವವನ್ನು ಕಾಣುವ ಸೂಫಿ ಸಂಗೀತ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಂತಹ ಐತಿಹಾಸಿಕ ಸಿಕಂದರ್‌ ಘರಾಣದ ಹಿರಿಮೆಯನ್ನು ನಿಜಾಮಿ ಸಹೋದರರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಸಂಗೀತ ಕ್ಷೇತ್ರದಲ್ಲಿನಿಜಾಮಿ ಸಹೋದರರು ಎಂದು ಚಿರಪರಿಚಿತರಾದಉಸ್ತಾದ್‌ ಚಾಂದ್‌, ಶಹದಾಬ್‌ ಫರಿದಿ ಮತ್ತು ಶೊಹ್ರಾಬ್‌ ಫರಿದಿ ಅವರು ದಶಕಗಳಿಂದಸೂಫಿ ಸಂಗೀತದ ಮಧುವನ್ನು ದೇಶಕ್ಕೆ ಉಣಬಡಿಸುತ್ತಿದ್ದಾರೆ.

‘ಸೂಫಿಯಾನ ಕಲಾಂ’ ಏಕತೆ ಸಾರಿದರೆ, ರುಹಾನಿಯತ್‌ ಅಂದರೆ ಆತ್ಮದ ಜತೆ ಅನುಸಂಧಾನ ಕವ್ವಾಲಿಯ ತಿರುಳು. ದೇವರು ಗುಡಿ, ಗೋಪುರ, ಮಂದಿರ, ಮಸೀದಿ, ಚರ್ಚ್‌ಗಳಂತಹ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಲ್ಲ. ದೇವರು ನಮ್ಮ ಶುದ್ಧ ಅಂತರಂಗದಲ್ಲಿ, ಹೃದಯದಲ್ಲಿ ನೆಲೆಸಿದ್ದಾನೆ ಎಂಬ ಸೂಫಿಗಳ ಮೂಲ ಸಂದೇಶವನ್ನು ನಿಜಾಮಿ ಸಹೋದರರು ತಮ್ಮ ಕಂಚಿನ ಕಂಠದ ಮೂಲಕ ದೇಶದಲ್ಲಿ ಹರಡುವ ಉದಾತ್ತ ಕೆಲಸದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.