ADVERTISEMENT

ಮೋಡ ಮತ್ತು ಅರಿವು

ವಿಜಯಕಾಂತ ಪಾಟೀಲ
Published 5 ಮೇ 2018, 19:30 IST
Last Updated 5 ಮೇ 2018, 19:30 IST
ಚಿತ್ರ: ಶಶಿಧರ ಹಳೇಮನಿ
ಚಿತ್ರ: ಶಶಿಧರ ಹಳೇಮನಿ   

ನಾ ಮೋಡವಾದರೆ
ಈ ವಸುಂಧರೆಯ ಕಥೆಯನ್ನು
ಕವಿತೆಯನಾಗಿಸುತ್ತೇನೆ

ಸದಾ ಹರಿವ ಅರಿವಾಗುತ್ತೇನೆ
ಹಸಿರ ಅರಿವೆಯೂ ಆಗಿ
ಖರೆ ಕಾವ್ಯ ಜಗತ್ತು ನಿರ್ಮಿಸುತ್ತೇನೆ

ಮರ ಗಿಡಗಂಟಿಗಳ
ಕೊರಳ ನಾದವನೇ
ನಾಡಗೀತೆಯನಾಗಿಸಿ

ADVERTISEMENT

ಅಜ್ಜಿ ನೂತ ಕೌದಿಯನೇ
ಜಗದ ಧ್ವಜವನಾಗಿಸಿಯೂ
ಈ ನೆಲದ ಕಡ ತೀರಿಸಲೆತ್ನಿಸುತ್ತೇನೆ;

ಈ ಮನುಕುಲವನೊಂದೇ ಅಲ್ಲ,
ಸಕಲ ಪ್ರಕೃತಿ ಕುಡಿಗಳನೆಲ್ಲ ಕೂಡಿಸಿ
ಬೆವರ ಬಕುತಿಗೆ ತಕ್ಕ ಪ್ರತಿಫಲ
ದೊರಕುವಂತೆ ಕರಗಿ
ನಾನೂ ಹಗುರಾಗುತ್ತೇನೆ;
ಸಾರ್ಥಕ್ಯ ಪಡೆಯುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.