ತುದಿಬೆರಳ ಹಿಡಿದೆನ್ನ ನಡೆಸಿ
ತೊದಲು ಮಾತಿನ ತೊಡಕು ಬಿಡಿಸಿ
ಹೆಗಲ ಮೇಲೆ ಹೊತ್ತು ತಿರುಗಾಡಿಸಿ
ಮುದ್ದು ಮಾಡಿ ಬೆಳೆಸಿದವರು ನನ್ನ ತಂದೆ
ಕುಟುಂಬಕ್ಕೆ ಭದ್ರ ಬುನಾದಿ
ತಾಯಿ ಪ್ರೀತಿಯ ಮಾತೃ ಸ್ವರೂಪಿ
ಎನ್ನ ಬಾಳಿನ ರೈಲು ಕಂಬಿ
ಕಣ್ತುಂಬಿ ಕೈಮುಗಿವ ದೇವರೇ ನನ್ನ ತಂದೆ
ಹಾಲಲ್ಲಿನ ನೀರಿನಂತೆ
ಜೇನಲ್ಲಿನ ಸಿಹಿಯಂತೆ
ಪುಷ್ಪದಲ್ಲಿನ ಪರಿಮಳದಂತೆ
ನಾ ಕಂಡ ಮೊದಲ ದೇವರು ನನ್ನ ತಂದೆ
ನನ್ನ ಬಾಳಿನ ಬೆಳದಿಂಗಳು
ನನ್ನ ಛಾಯೆಯ ಪ್ರತಿರೂಪ
ಎಂದಿಗೂ ಬಂದಿಲ್ಲ ಅವರಿಗೆ ಕೋಪ
ಎಲ್ಲರಿಗೂ ಸಿಗಲಿ ಇಂಥ ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.