ಸುರ‍್ರನೆ ಸುರಿಯುತ ಮಳೆ
ಬಂತು ಮಳೆ
ಊರೆಲ್ಲ ಹರಿದು ತಂಪು
ಆಯಿತು ಇಳೆ
ಸಂದಿಗೊಂದಿ ನೀರು ನುಗ್ಗಿ
ತೊಳೆಯಿತು ಕೊಳೆ
ಮಳೆ ಹನಿಗೆ ಹಸಿರಾಯಿತು
ಒಣಗಿ ನಿಂತ ಬೆಳೆ
ತುಂಬಿದವು ಬಾವಿ ಹಳ್ಳ ಕೊಳ್ಳ,
ಕೆರೆ ಹೊಳೆ
ರೈತನ ಮೊಗದಲ್ಲಿ ಮೂಡಿತು
ನಗುವಿನ ಕಳೆ
ಜಾನುವಾರುಗಳಿಗೆ ಇಂಗಿತು
ಜಲಧಾರೆಯ ದಾಹ
ಮಳೆಯಿಂದ ತಪ್ಪಿತು ಜನರ
ನೀರಿನ ಕಲಹ
ಮಳೆಗೆ ಮರದ ಹೂ ಚಿಗುರು
ಅರಳಿತು ನಲಿಯುತ
ಪ್ರಾಣಿಪಕ್ಷಿಗಳು ತಿಂದವು ಸಿಹಿ
ಹಣ್ಣನು ಸವಿಯುತ
ಹಸಿರಿನಿಂದ ಎಲ್ಲೆಲ್ಲೂ ನಾಡು
ಕಾಡು ಸಂಪದ್ಭರಿತ
ನಿಸರ್ಗವೇ ಸ್ವರ್ಗದಂತೆ ಮಳೆ
ತಂದಿತು ಸಂತಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.