ಸೂಟಿ ಮುಗೀತೋ ಯಪ್ಪ
ಸಾಲೀಗೆ ಹೊಂಟೇನಪ್ಪ!
ಹೊಳಿಸಾಲ ಆಟ
ಮಾವಿನ ಮರದನ ಹಾರಾಟ
ಹೆಂಗ ಮರೀಲೋ ತಿಪ್ಪ!
ಬೇಲ್ಯಾಗಿನ ಜೇನ ತುಪ್ಪ
ಮನ್ಯಾಗಿನ ಕೆನಿ ತುಪ್ಪ
ಸಾಲ್ಯಾಗ ಎಲ್ಲೈತೋ ಬೆಪ್ಪ?
ನಾಕ ನಾಕಲೆ ಹದ್ನಾರು
ಮುಂಜಾಲೆ ಹೇಳ್ತಾರು;
ಎಂಟ ಎರಡಲೆ ಹದ್ನಾರು
ಸಂಜೀ ಮುಂದ ಹೇಳ್ತಾರು!
ಕನಸಿನ್ಯಾಗೂ ಮಗ್ಗೀ ಬಂದು
ಕುಣದಂಗಾಗತೈತಿ
ಸಾಲಿಗೆ ಹೋಗಾಕ ಎದಿ
ಢವ ಢವ ಅನತೈತಿ!
ಹಾಡ್ತಾ, ಕುಣೀತಾ ಕಲ್ಸಿದ್ರೆ ಪಾಠ
ಕಲೀತೀನಿ ಎಲ್ಲ ಪಟ ಪಟ!
ಗ್ರೌಂಡಿನ್ಯಾಗ ಆಡ್ಸಿದ್ರೆ ಆಟ
ತಿಳೀತೈತಿ ನಂಗೆ ಪಾಠ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.