ADVERTISEMENT

ಬಣ್ಣದ ಚಿಟ್ಟೆ

ಮೌಲಾಲಿ ಕೆ ಆಲಗೂರ ಸಿಂದಗಿ
Published 13 ಅಕ್ಟೋಬರ್ 2018, 19:45 IST
Last Updated 13 ಅಕ್ಟೋಬರ್ 2018, 19:45 IST
   

ನೋಡಲು ಚಂದ ನಿನ್ನಯ ಅಂದ
ಓ ನನ್ನ ಕನಸಿನ ಚಿಟ್ಟೆ
ರಂಗು ರಂಗಿನ ಅಂಗಿಯ ತೊಟ್ಟು
ಎಲ್ಲಿಗೆ ನೀ ಹೊರಟೆ

ಹೂವಿನ ಮಕರಂದವ ಸವಿದು
ಸಂತಸದಿ ನಲಿಯುವೆ
ರೆಕ್ಕೆಯ ಬಡಿದು ಬಾನೆತ್ತರ ಹಾರಿ
ಆಕಾಶದಲ್ಲಿ ತೇಲುವೆ

ಹಸಿರು ವನಸಿರಿಯಲ್ಲಿ ನೀನೊಂದು
ಮಿನುಗುವ ಚಲುವೆ
ಆಕರ್ಷಣೀಯ ಮೈ ಬಣ್ಣಗಳಿಂದ
ಎಲ್ಲರನು ಸೆಳೆಯುವೆ

ಮಳೆ ಬರಲಿ ಚಳಿ ಇರಲಿ ಬಿರುಗಾಳಿ
ಬೀಸಲಿ ಅಂಜುವುದಿಲ್ಲ
ಒತ್ತಡ, ಚಿಂತೆ, ದುಃಖಗಳಿಲ್ಲ ನಗುವು
ಒಂದೇ ನಿನ್ನಯ ಮೂಲ

ಸುಂದರ ಸುಖದ ನೆಮ್ಮದಿ ಬದುಕು
ಇತರರಿಗೆ ಕೆಡಕು ಬಯಸಲ್ಲ
ಚಿಟ್ಟೆಗಳೇ ನಿಮ್ಮ ಸಂತಸದ ಜೀವನ
ಆದರ್ಶವಾಗಲಿ ನಮಗೆಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.